ಮೈಸೂರು

ಬಿಜೆಪಿಯ ಬೂತ್ ಸಶಕ್ತೀಕರಣ ಕಾರ್ಯಾಗಾರಕ್ಕೆ ಚಾಲನೆ

ಮೈಸೂರು,ಸೆ.22-ಭಾರತೀಯ ಜನತಾ ಪಾರ್ಟಿ ವತಿಯಿಂದ ಶುಕ್ರವಾರ ನಗರದ ಖಾಸಗಿ ಛತ್ರದಲ್ಲಿ ಬೂತ್ ಸಶಕ್ತೀಕರಣ ಕಾರ್ಯಾಗಾರ ಆಯೋಜಿಸಲಾಗಿತ್ತು. ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಸಂತೋಷ ಜೀ, ಬೂತ್ ಮಟ್ಟದಲ್ಲಿನ ಮತದಾರರನ್ನು ಭೇಟಿಯಾಗಿ ಬಿಜೆಪಿ ಸರ್ಕಾರ ಜಾರಿಗೆ ತಂದಿರುವ ಜನಪರ ಯೋಜನೆಗಳ ಬಗ್ಗೆ ಅರಿವು ಮೂಡಿಸಿ ಬಿಜೆಪಿಗೆ ಮತಹಾಕುವಂತೆ ಅವರಲ್ಲಿ ಅರಿವು ಮೂಡಿಸಿ ಎಂದರು.

ಚುನಾವಣೆ ಸಂಭವಿಸುತ್ತಿದ್ದು, ಬೂತ್ ಚುನಾವಣೆಯ ಕೇಂದ್ರ ಸ್ಥಾನವಾಗಿದೆ. ಬೂತ್ ಕಾರ್ಯ ಬಿಜೆಪಿಯ ಚುನಾವಣಾ ತಂತ್ರದ ಪ್ರಮುಖ ಭಾಗ. ಸಶಕ್ತ ಮತಗಟ್ಟೆ ತಂಡ ನಮ್ಮ ಯಶಸ್ಸಿನ ಅತಿ ಮುಖ್ಯ ಅವಶ್ಯಕತೆ. ಮತದಾರರನ್ನು ಸಂಪರ್ಕಿಸಿ ಅವರನ್ನು ಬಿಜೆಪಿ ಪರವಾಗಿ ಮತ ನೀಡುವಂತೆ ಮನವೊಲಿಸಿ, ಮತದಾನದ ದಿನ ಬೇಗನೆ ಮತಗಟ್ಟೆಗೆ ಬಂದು ಮತ ಚಲಾಯಿಸುವಂತೆ ಮಾಡಬೇಕಾಗಿರುವುದರಿಂದ ಈ ಕಾರ್ಯಾಗಾರ ಆಯೋಜಿಸಲಾಗಿತ್ತು.

ಬೂತ್ ಸಮಿತಿ ರಚನೆ, ಬೂತ್ ಅಧ್ಯಯನ, ಬೂತ್ ಪರಿಶೀಲನೆಯ 3ನೇ ಹಂತದ ಬೂತ್ ಸಶಕ್ತೀಕರಣದ ಅಭಿಯಾನದಲ್ಲಿ ನಾವೆಲ್ಲರೂ ಪಾಲ್ಗೊಳ್ಳಬೇಕು. ಸೆ.15 ರಿಂದ 25 ರವರೆಗೆ ಬೂತ್ ಸಮಿತಿ ರಚನೆ, ಸೆ.26 ರಿಂದ ಅಕ್ಟೋಬರ್ 5ರವರೆಗೆ ಬೂತ್ ಸಮಿತಿಯಿಂದ ಬೂತ್ ಅಧ್ಯಯನ, ಅಕ್ಟೋಬರ್ 6 ರಿಂದ 15 ರವರೆಗೆ ನಿಯೋಜಿತ ಮಂಡಲ, ಜಿಲ್ಲಾ ಪದಾಧಿಕಾರಿಗಳಿಂದ ಬೂತ್ ಸಮಿತಿ ಪರಿಶೀಲನೆ ನಡೆಲಾಗುವುದು.

ಕಾರ್ಯಾಗಾರದಲ್ಲಿ ಎನ್.ಆರ್.ಕ್ಷೇತ್ರದ ಬೂತ್ ಕಮಿಟಿಯ 68 ಮುಖ್ಯಸ್ಥರು ಭಾಗವಹಿಸಿದ್ದರು. ಮಾಜಿ ಸಚಿವ ಎಸ್.ಎ.ರಾಮದಾಸ್, ಬಿಜೆಪಿ ನಗರಾಧ್ಯಕ್ಷ ಡಾ.ಬಿ.ಎಚ್.ಮಂಜುನಾಥ್, ಎಂ.ವಿ.ರವಿಶಂಕರ್,  ಸು.ಮುರಳಿ, ಬಿ.ಎಂ.ನಟರಾಜ್, ಬಿ.ಪಿ.ಮಂಜುನಾಥ್ ಇತರರು ಉಪಸ್ಥಿತರಿದ್ದರು. (ವರದಿ-ಎಚ್.ಎನ್, ಎಂ.ಎನ್)

 

Leave a Reply

comments

Related Articles

error: