ಮೈಸೂರು

ಸರ್ಕಾರಕ್ಕೆ ಹೆಸರು ಬರುವಂತೆ ಸ್ತಬ್ಧಚಿತ್ರ ನಿರ್ಮಿಸಿ: ಹಿನಕಲ್ ಉದಯ್

ಮೈಸೂರು, ಸೆ.೨೨: ಕಲಾವಿದರು ಸ್ತಬ್ಧಚಿತ್ರಗಳನ್ನು ಸರ್ಕಾರಕ್ಕೆ ಒಳ್ಳೆಯ ಹೆಸರು ಬರುವಂತೆ ನಿರ್ಮಿಸಬೇಕು ಹಾಗೂ ನಿಗಧಿತ ಅವಧಿಯೊಳಗೆ ಮುಗಿಸಬೇಕೆಂದು ದಸರಾ ಸ್ತಬ್ಧಚಿತ್ರ ಉಪಸಮಿತಿಯ ಅಧ್ಯಕ್ಷ ಹಿನಕಲ್ ಉದಯ್ ತಿಳಿಸಿದರು.
ಬಂಡಿಪಾಳ್ಯದ ಎಪಿಎಂಸಿ ಆವರಣದಲ್ಲಿ ನಿರ್ಮಾಣವಾಗುತ್ತಿರುವ ಸ್ತಬ್ಧಚಿತ್ರಗಳನ್ನು ಸಮಿತಿಯ ಉಪಾಧ್ಯಕ್ಷರು, ಸದಸ್ಯರು ಹಾಗೂ ಅಧಿಕಾರಿಗಳೊಂದಿಗೆ ಪರಿಶೀಲಿಸಿ ಮಾತನಾಡಿದ ಅವರು, ಕಲಾವಿದರಿಗೆ ನೀರು ಮತ್ತು ವಿದ್ಯುತ್ ಸೌಲಭ್ಯವನ್ನು ಒದಗಿಸಬೇಕು. ಕೆಲವು ಸ್ತಬ್ಧಚಿತ್ರಗಳು ಈಗ ಪ್ರಾರಂಭವಾಗುತ್ತಿವೆ. ನೋಡಲ್ ಅಧಿಕಾರಿಗಳು ಗಮನಹರಿಸಿ ನಿಗದಿತ ಅವಧಿಯೊಳಗೆ ಸ್ತಬ್ಧಚಿತ್ರಗಳು ನಿರ್ಮಾಣವಾಗುವಂತೆ ನೋಡಿಕೊಳ್ಳಬೇಕು ಹಾಗೂ ಸ್ತಬ್ಧಚಿತ್ರ ಉಪಸಮಿತಿಯ ಸದಸ್ಯರುಗಳು ಮೆರವಣಿಗೆಯಲ್ಲಿ ಸ್ತಬ್ಧಚಿತ್ರಗಳೊಂದಿಗೆ ಹೋಗಲು ಅವಕಾಶ ಮಾಡಿಕೊಡಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಸಮಿತಿಯ ಉಪಾಧ್ಯಕ್ಷ ಈಶ್ವರ್ ಚಕ್ಕಡಿ, ಪ್ರೊ.ಶಿವಕುಮಾರ್, ಜಿ.ಪಂ. ಸಿಪಿಒ ಹಾಗೂ ಸಮಿತಿಯ ಕಾರ್ಯದರ್ಶಿ ಕೆ.ಪಿ. ಪ್ರಭುಸ್ವಾಮಿ, ಕಾರ್ಯದರ್ಶಿ ರಾಮಕೃಷ್ಣೇಗೌಡ, ಎಪಿಎಂಸಿ ಕಾರ್ಯದರ್ಶಿ ಎ.ಆರ್.ಮಹೇಶ್, ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಕೆ.ಪಿ. ಗುರುರಾಜ್, ಜೆಸ್ಕಾಂ ಎಇಇ ಚಿಕ್ಕಸಿzಗೌಡ, ಸಿ.ಆರ್. ಶ್ರೀನಿವಾಸ್, ಸದಸ್ಯರಾದ ದೊಡ್ಡಹುಂಡಿ ಸೋಮಣ್ಣ, ಕೆ.ಬಿ. ಸ್ವಾಮಿ, ರಾಜು, ಮೀನು ಬಸವಣ್ಣ, ಮಹಮ್ಮದ್ ಫಾರುಕ್, ಚಿಕ್ಕಳ್ಳಿ ಕೃಷ್ಣ ಮತ್ತಿತರರು ಹಾಜರಿದ್ದರು. (ವರದಿ ಬಿ.ಎಂ)

Leave a Reply

comments

Related Articles

error: