ಸುದ್ದಿ ಸಂಕ್ಷಿಪ್ತ
ಸೆ.24ಕ್ಕೆ ವಿಚಾರಗೋಷ್ಠಿ ಹಾಗೂ ಕೃತಿ ಲೋಕಾರ್ಪಣೆ
ಮೈಸೂರು,ಸೆ.22 : ಮೈಸೂರುರತ್ನ ಸಾಂಸ್ಕೃತಿಕ ಪ್ರತಿಷ್ಠಾನ ಹಾಗೂ ಇತರ ಸಂಸ್ಥೆ ಸಹಯೋಗದೊಂದಿಗೆ ನದಿಗಳ ಜೋಡಣೆ – ಸಾಧಕ ಬಾಧಕಗಳು ವಿಚಾರ ಸಂಕಿರಣ ಹಾಗೂ ನಿಂಗರಾಜ ಮಲ್ಲಾಡಿಯವರ ಅಭಿನಂದನೆ ಹಾಗೂ ಕೃತಿಗಳ ಲೋಕಾರ್ಪಣೆಯನ್ನು ಸೆ.24ರ ಸಂಜೆ 4.30ಕ್ಕೆ ರೋಟರಿ ಸಭಾಂಗಣದಲ್ಲಿ ಆಯೋಜಿಸಿದೆ.
ಹುಣಸೂರು ಡೀಡ್ ಸಂಸ್ಥೆ ನಿರ್ದೇಶಕ ಡಾ.ಎಸ್.ಶ್ರೀಕಾಂತ್ ಉದ್ಘಾಟಿಸುವರು, ಮಕ್ಕಳ ತಜ್ಞ ಡಾ.ಪಿ.ಶಿವು ‘ಸಮತಲ ಕಾಲುವೆ ನಿರ್ಮಾಣದಿಂದ ನೀರಾವರಿ ನಾಲಾ ಜಾಲ ಸೃಷ್ಠಿ’ ವಿಚಾರ ಮಂಡಿಸುವರು. (ಕೆ.ಎಂ.ಆರ್)