ಸುದ್ದಿ ಸಂಕ್ಷಿಪ್ತ
ಸೆ.24ಕ್ಕೆ ತರಳುಬಾಳು ಶ್ರೀಗಳ 25ನೇ ಶ್ರದ್ಧಾಂಜಲಿ
ಮೈಸೂರು,ಸೆ.22 : ತರಳಬಾಳು ಸಮಾಗಮದಿಂದ ಲಿಂಗೈಕ್ಯ ಜಗದ್ಗುರು ಶ್ರೀ ಶಿವಕುಮಾರ್ ಶಿವಾಚಾರ್ಯ ಸ್ವಾಮೀಜಿಯವರ 25ನೆ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ಸೆ.24ರ ಸಂಜೆ 6.30ಕ್ಕೆ ಹೊಸಬನ್ನಿಮಂಟಪದ ರಸ್ತೆ ತರಳಬಾಳು ಜಗದ್ಗುರು ವಿದ್ಯಾರ್ಥಿ ನಿಲಯದಲ್ಲಿ ಆಯೋಜಿಸಿದೆ.
ಸಾಹಿತಿ ಡಾ.ಸಿ.ಪಿ.ಕೃಷ್ಣಮೂರ್ತಿ ನುಡಿನಮನ ಸಲ್ಲಿಸುವರು, ತರಳಬಾಳು ಸಮಾಗಮದ ಗೌರವಾಧ್ಯಕ್ಷ ಎ.ಓಂಕಾರಪ್ಪ ಅಧ್ಯಕ್ಷತೆ ವಹಿಸುವರು. (ಕೆ.ಎಂ.ಆರ್)