ಸುದ್ದಿ ಸಂಕ್ಷಿಪ್ತ
ಸೆ.24ರಂದು ಶೋಭಾಯಾತ್ರೆ ಹಾಗೂ ಗುರುವಂದನಾ
ಮೈಸೂರು,ಸೆ.22 : ಯಾದಗಿರಿ ಜಿಲ್ಲೆಯ ಕಣ್ವಮಠದ ಪೀಠಾಧೀಶ್ವರ ಶ್ರೀ ವಿದ್ಯಾವಾರಧಿ ತೀರ್ಥ ಶ್ರೀಗಳು ಸೆ.24ರಂದು ಮೈಸೂರಿಗೆ ಆಗಮಿಸುತ್ತಿದ್ದು, ಇದರಂಗವಾಗಿ ಮೈಸೂರು ಜಿಲ್ಲಾ ಮತ್ತು ನಗರ ತ್ರಿಮತಸ್ಥ ಬ್ರಾಹ್ಮಣ ಸಂಘವು ಶೋಭಾಯಾತ್ರೆ ಹಾಗೂ ಗುರುವಂದನಾ ಕಾರ್ಯಕ್ರಮ ಆಯೋಜಿಸಿದೆ
ಅಂದು ಬೆಳಗ್ಗೆ 9 ಗಂಟೆಯಿಂದ ಆರ್.ಟ.ಓ ವೃತ್ತದಿಂದ ಕೃಷ್ಣಮೂರ್ತಿಪುರಂನ ಶ್ರೀರಾಮ ಮಂದಿರದವರೆಗೆ ಶೋಭಾಯಾತ್ರೆಯನ್ನು ಹಮ್ಮಿಕೊಂಡಿದೆ. ಕಾರ್ಯಕ್ರಮದಲ್ಲಿ ಮಾಜಿ ಸಚಿವ ಎಸ್.ಎ.ರಾಮದಾಸ್, ಮುಡಾ ಮಾಜಿ ಅಧ್ಯಕ್ಷ ಮೋಹನ್ ಕುಮಾರ್, ಹೆಚ್.ವಿ.ರಾಜೀವ್, ಬಿ.ಆರ್.ನಟರಾಜ್ ಜೋಯಿಸ್,ಕೆ.ರಘುರಾಂ ಮೊದಲಾದವರು ಪಾಲ್ಗೊಳ್ಳುವರು.
ನಂತರ ವಿವಿಧ ಧಾರ್ಮಿಕ ಹಾಗೂ ಗುರುವಂದನಾ ಕಾರ್ಯಕ್ರಮದಲ್ಲಿ ನಡೆಯುವುದು. (ಕೆ.ಎಂ.ಆರ್)