ಸುದ್ದಿ ಸಂಕ್ಷಿಪ್ತ

ದೃಷ್ಠಿ ವಿಕಲಚೇತನರ ರಾಜ್ಯಮಟ್ಟದ ಚೆಸ್ ಪಂದ್ಯಾವಳಿ ಸೆ.23ಕ್ಕೆ

ಮೈಸೂರು,ಸೆ.22 : ಲೂಯಿಬ್ರೈಲ್ ದೃಷ್ಟಿ ವಿಕಲಚೇತನರ ಸೇವಾ ಪ್ರತಿಷ್ಠಾನ ಹಾಗೂ ದಸರಾ ಕ್ರೀಡಾ ಸಮಿತಿ ಸಂಯುಕ್ತಾಶ್ರಯದಲ್ಲಿ ದಸರಾ ಕ್ರೀಡಾಕೂಟ ಹಾಗೂ  ದೃಷ್ಟಿ ವಿಕಲಚೇತನರ ರಾಜ್ಯಮಟ್ಟದ ಚೆಸ್ ಪಂದ್ಯಾವಳಿಯನ್ನು ಸೆ.23ರ ಬೆಳಗ್ಗೆ 9.30ಕ್ಕೆ, ಕೆ.ಎಸ್.ಓ.ಯುನ ಮುಕ್ತಗಂಗೋತ್ರಿಯಲ್ಲಿ ನಡೆಯುವುದು.

ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ.ಚೆನ್ನಣ್ಣನವರು ಉದ್ಘಾಟಿಸುವರು, ದಸರಾ ಕ್ರೀಡಾ ಉಪಸಮಿತಿಯ ಕಾರ್ಯಾಧ್ಯಕ್ಷ ಸತೀಶ್ ಕುಮಾರ್, ಕಾರ್ಯದರ್ಶಿ ಕೆ.ಸುರೇಶ್, ನಿವೃತ್ತ ಪ್ರಾಂಶುಪಾಲ ಪ್ರೊ.ಹೆಚ್.ಆರ್.ಸಿದ್ದೇಗೌಡ ಮೊದಲಾದವರು ಪಾಲ್ಗೊಳ್ಳುವರು.

ಮಧ್ಯಾಹ್ನ 2.30ಕ್ಕೆ ನಡೆಯುವ ಸಮಾರೋಪದಲ್ಲಿ ಮುಖ್ಯ ಅತಿಥಿಗಳಾಗಿ ನಗರಪಾಲಿಕೆ ಸದಸ್ಯ ಜೆ.ಎಸ್. ಜಗದೀಶ್, ಯು.ಪಿ.ಎಸ್.ಸಿ. ರ್ಯಾಂಕ್ ವಿಜೇತ ಕೆಂಪಹೊನ್ನಯ್ಯ, ಜಿಲ್ಲಾ ನಿವೃತ್ತ ಅಂಗವಿಕಲ ಕಲ್ಯಾಣಾಧಿಕಾರಿ ಹೆಚ್.ಎಸ್.ಬಲರಾಮ್ ಮೊದಲಾದವರು ಪಾಲ್ಗೊಳ್ಳುವರು. (ಕೆ.ಎಂ.ಆರ್)

Leave a Reply

comments

Related Articles

error: