ಸುದ್ದಿ ಸಂಕ್ಷಿಪ್ತ

ಸೆ.25 ರಿಂದ ಬುಡಕಟ್ಟು ಸಂಶೋಧನಾ ಸಂಸ್ಥೆಯಿಂದ ರಾಷ್ಟ್ರೀಯ ವಿಚಾರ ಸಂಕಿರಣ

ಮೈಸೂರು,ಸೆ.22 : ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯು “ಭಾರತದಲ್ಲಿನ ಬುಡಕ್ಟು ಸಮುದಾಯಗಳು ಜೀವನೋಪಾಯ : ಸವಾಲುಗಳು ಮತ್ತು ಅವಕಾಶಗಳು” ವಿಷಯವಾಗಿ  ರಾಷ್ಟ್ರೀಯ ವಿಚಾರ ಸಂಕಿರಣವನ್ನು ಸೆ.25 ಮತ್ತು 26ರಂದು ಬೆಳಗ್ಗೆ 11 ಗಂಟೆಗೆ ಆಡಳಿತ ತರಬೇತಿ ಸಂಸ್ಥೆಯಲ್ಲಿ ಆಯೋಜಿಸಲಾಗಿದೆ.

ಭಾ.ಆ.ಸೇ ಅಪರ ಮುಖ್ಯಕಾರ್ಯದರ್ಶಿ ಎಂ.ಲಕ್ಷ್ಮೀನಾರಾಯಣ ಉದ್ಘಾಟಿಸುವರು, ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ ನಿರ್ದೇಶಕ  ಪ್ರೊ.ಟಿ.ಬಿ.ಬಸವನಗೌಡ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಯಾಗಿ ಡಾ.ಸಂದೀಪ್ ದವ್, ಡಾ.ಇ.ವೆಂಕಟಯ್ಯ, ಕೆ.ರೇವಣ್ಣಪ್ಪ, ಆರ್.ಎಸ್.ಪೆದ್ದಪ್ಪಯ್ಯ ಮೊದಲಾದವರು ಪಾಲ್ಗೊಳ್ಳುವರು. (ಕೆ.ಎಂ.ಆರ್)

Leave a Reply

comments

Related Articles

error: