ಸುದ್ದಿ ಸಂಕ್ಷಿಪ್ತ
ವಿದ್ಯಾವರ್ಧಕ ಕಾಲೇಜಿನ ಕಲಾ ಸಂಭ್ರಮ ಸೆ.23ಕ್ಕೆ
ಮೈಸೂರು,ಸೆ.22 : ವಿದ್ಯಾವರ್ಧಕ ಪ್ರಥಮ ದರ್ಜೆ ಕಾಲೇಜಿನ ಕಲಾಸಂಭ್ರಮ ಸೆ.23ರ ಬೆಳಗ್ಗೆ 9.30ಕ್ಕೆ ಕಾಲೇಜು ಸಭಾಂಗಣದಲ್ಲಿ ನಡೆಯುವುದು.
ಡಾ.ಪಿ.ಕೆ.ರಾಜಶೇಖರ ಉದ್ಘಾಟಿಸುವರು, ವಿವಿ ಸಂಘದ ಅಧ್ಯಕ್ಷ ಗುಂಡಪ್ಪಗೌಡ ಅಧ್ಯಕ್ಷತೆ ವಹಿಸುವರು, ಮುಖ್ಯ ಅತಿಥಿಯಾಗಿ ಎಸ್.ಎನ್.ಲಕ್ಷ್ಮೀನಾರಾಯಣ, ಕೈಲಾಸ ಮೂರ್ತಿ, ಡಾ.ಎಸ್.ಮರೀಗೌಡ ಭಾಗವಹಿಸುವರು.
ಕಲಾಸಂಭ್ರಮದಂಗವಾಗಿ ಅಂತರ ಕಾಲೇಜು ಚರ್ಚಾ ಸ್ಪರ್ಧೆ, ಸಮೂಹ ಗಾಯನ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಸಂಜೆ 4ಕ್ಕೆ ಸಮಾರೋಪ ಸಮಾರಂಭ ನಡೆಯುವುದು. (ಕೆ.ಎಂ.ಆರ್)