ದೇಶಪ್ರಮುಖ ಸುದ್ದಿ

ಆಂಧ್ರಪ್ರದೇಶಕ್ಕೆ ವಿಧಾನಮಂಡಲ ಹೊಸ ಕಟ್ಟಡ ನಿರ್ಮಾಣ : ಸಲಹೆಗಾರರ ತಂಡದಲ್ಲಿ ರಾಜಮೌಳಿ

ಹೈದರಾಬಾದ್, ಸೆ. 22 : ತೆಲಂಗಾಣ ಮತ್ತು ಆಂಧ್ರಪ್ರದೇಶ ವಿಭಜನೆಯಾದ ನಂತರ ಹೊಸ ರಾಜಧಾನಿ ಅಮರಾವತಿಯಲ್ಲಿ ಆಂಧ್ರಪ್ರದೇಶಕ್ಕೆ ನೂತನ ವಿಧಾನಮಂಡಲ ಕಟ್ಟಡ ನಿರ್ಮಿಸಲು ಸಿದ್ಧತೆ ನಡೆದಿದೆ.

ಈ ಹೊಸ ಕಟ್ಟಡ ನಿರ್ಮಾಣದ ವಿಷಯದಲ್ಲಿ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಸ್ವತಃ ಕಾಳಜಿ ವಹಿಸುತ್ತಿದ್ದು, ಕಟ್ಟಡದ ರೂಪರೇಷೆ ಸಿದ್ಧಪಡಿಸುವ ಸಲಹೆಗಾರರ ತಂಡದಲ್ಲಿ ಬಾಬಹುಬಲಿ ಖ್ಯಾತಿಯ ಚಿತ್ರನಿರ್ದೇಶಕ ರಾಜಮೌಳಿ ಅವರಿಗೂ ಸ್ಥಾನ ನೀಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಾಜಮೌಳಿ ಅವರು, ಹೊಸ ರಾಜಧಾನಿ ಅಮರಾವತಿಯಲ್ಲಿ ತಾವು ಕೇವಲ ಅಸೆಂಬ್ಲಿ ಕಟ್ಟಡದ ವಿನ್ಯಾಸದಲ್ಲಿ ತೊಡಗಿಸಿಕೊಂಡಿರುವುದಾಗಿ ತಿಳಿಸಿದ್ದಾರೆ.

ಆಂಧ್ರ ಪ್ರದೇಶ ಸರ್ಕಾರವು ರಾಜ್ಯಕ್ಕೆ ಹೊಸ ರಾಜಧಾನಿ ನಿರ್ಮಿಸಲು ಮುಂದಾಗಿದ್ದು, ಅದರ ಸಂಪೂರ್ಣ ಉಸ್ತುವಾರಿಯನ್ನು ಲಂಡನ್‍ನ ಫಾಸ್ಟರ್ ಪ್ಲಸ್ ಪಾರ್ಟ್ ನರ್ಸ್ ಎಂಬ ಸಂಸ್ಥೆಗೆ ನೀಡಿದೆ. ಈ ಮಹಾನಗರದ ನಿರ್ಮಾಣದಲ್ಲಿ ರಾಜಮೌಳಿ ತೊಡಗಿಸಿಕೊಂಡಿದ್ದು, ಇಡೀ ಯೋಜನೆಯ ಮೇಲುಸ್ತುವಾರಿಯನ್ನು ರಾಜಮೌಳಿ ವಹಿಸಿಕೊಂಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿದ್ದವು. ಆದರೆ ಈ ವರದಿಗಳನ್ನು ಅಲ್ಲಗಳೆದಿರುವ ರಾಜಮೌಳಿ, ಸಂಪೂರ್ಣ ನಗರದ ರೂಪರೇಷೆಯಲ್ಲಿ ನನ್ನ ಪಾತ್ರವಿಲ್ಲ. ಆದರೆ ವಿಧಾನಮಂಡಲ ಕಟ್ಟಡದ ವಿನ್ಯಾಸದಲ್ಲಿ ಮಾತ್ರ ತೊಡಗಿಸಿಕೊಂಡಿರುವುದಾಗಿ ಸ್ಪಷ್ಟಪಡಿಸಿದ್ದಾರೆ.

ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಇಲ್ಲಿನ ಅಸೆಂಬ್ಲಿ ಕಟ್ಟಡವು ಇಡೀ ವಿಶ್ವದ ಗಮನ ಸೆಳೆಯುಂಥ ಕಟ್ಟಡವಾಗಬೇಕೆಂದು ಬಯಸಿದ್ದಾರೆ. ಇದಕ್ಕಾಗಿ ನನ್ನ ಸಲಹೆ ಕೇಳಿದ್ದರು. ಅವರ ಸ್ನೇಹಪೂರ್ವಕ ಆಗ್ರಹದ ಮೇರೆಗೆ ನಾನು ಕಟ್ಟಡ ವಿನ್ಯಾಸದ ವಿಚಾರದಲ್ಲಿ ಸಹಕರಿಸುತ್ತಿದ್ದೇನೆ ಎಂದು ಹೇಳಿದ್ದಾರೆ.

(ಎನ್.ಬಿ)

Leave a Reply

comments

Related Articles

error: