ಸುದ್ದಿ ಸಂಕ್ಷಿಪ್ತ

ವಿಶ್ವ ಔಷಧಿ ದಿನಾಚರಣೆ ಸೆ.23ಕ್ಕೆ

ಮೈಸೂರು,ಸೆ.22 : ಭಾರತೀಯ ಔಷಧೀಯ ಸಂಘ ಮತ್ತು ಜೆ.ಎಸ್.ಎಸ್ ಪಾರ್ಮಸಿ ಕಾಲೇಜು ಸಹಯೋಗದೊಂದಿಗೆ ವಿಶ್ವ ಔಷಧಿ ದಿನಾಚರಣೆಯನ್ನು ಸೆ.23ರ ಬೆಳಗ್ಗೆ 11 ಗಂಟೆಗೆ ರಾಜೇಂದ್ರ ಸಭಾಂಗಣದಲ್ಲಿ ಆಯೋಜಿಸಿದೆ.

ಮೈಸೂರು ವಿವಿ ವಿಶ್ರಾಂತ ಕುಲಪತಿ  ಪ್ರೊ.ಕೆ.ಎಸ್.ರಂಗಪ್ಪ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಕಾಲೇಜಿನ ಪ್ರಾಂಶುಪಾಲ ಡಾ.ಟಿ.ಎಂ.ಪ್ರಮೋದ್ ಕುಮಾರ್ ಅಧ್ಯಕ್ಷತೆ ವಹಿಸುವರು. ಉಪ ಔಷಧಿಗಳ ನಿಯಂತ್ರಕ ಸಿ.ಎಂ.ಶಿವಕುಮಾರ್, ಭಾರತೀಯ ಔಷಧೀಯ ಸಂಘದ ಅಧ್ಯಕ್ಷ ಡಾ.ಗುರುಬಸವರಾಜ್ ಪೂಜಾರ್ ಮೊದಲಾದವರು ಪಾಲ್ಗೊಳ್ಳುವರು. (ಕೆ.ಎಂ.ಆರ್)

Leave a Reply

comments

Related Articles

error: