
ದೇಶಪ್ರಮುಖ ಸುದ್ದಿ
ಆಸ್ಕರ್ ಸ್ಪರ್ಧೆಗೆ ಅಧಿಕೃತವಾಗಿ ಆಯ್ಕೆಯಾದ ಭಾರತದ ‘ನ್ಯೂಟನ್’
ಮುಂಬೈ, ಸೆ.22 (ಪ್ರಮುಖ ಸುದ್ದಿ): ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿಯ 2018ನೇ ಸಾಲಿನ ಸ್ಪರ್ಧೆಗೆ ಭಾರತದ “ನ್ಯೂಟನ್” ಚಿತ್ರ ಅಧಿಕೃತವಾಗಿ ಆಯ್ಕೆಯಾಗಿದೆ.
ಅಮಿತ್ ವಿ. ಮಸೂರ್ ಕರ್ ನಿರ್ದೇಶನದ ಮತ್ತು ರಾಜ್ಕುಮಾರ್ರಾವ್ ಮುಖ್ಯಪಾತ್ರದಲ್ಲಿರುವ ಈ ಚಿತ್ರವನ್ನು ಆಸ್ಕರ್ ಪ್ರಶಸ್ತಿಗೆ ಚಿತ್ರಗಳನ್ನು ಆಯ್ಕೆ ಮಾಡುವ ಸಂಬಂಧ ಶುಕ್ರವಾರ ನಡೆದ ಫಿಲ್ಮ್ ಫೆಡರೇಷನ್ ಆಫ್ ಇಂಡಿಯಾ ಸಭೆಯಲ್ಲಿ ಸದಸ್ಯರು ಅವಿರೋಧವಾಗಿ ಆಯ್ಯೆ ಮಾಡಿದ್ದಾರೆ. ಈ ವಿಷಯವನ್ನು ಫೆಡರೇಷನ್ನ ಅಧ್ಯಕ್ಷ ಹಾಗೂ ಖ್ಯಾತ ತೆಲುಗು ಚಿತ್ರ ನಿರ್ಮಾಪಕ ಸಿ.ವಿ ರೆಡ್ಡಿ ಅವರು ಮಾಧ್ಯಮಗಳಿಗೆ ತಿಳಿಸಿದರು.
ನ್ಯೂಟನ್ ಚಿತ್ರವು ಸಾಮಾಜಿಕ ಜಾಗೃತಿಯ ಉದ್ದೇಶವಿರುವ ವಿಭಿನ್ನ ಕಥಾ ಹಂದರವನ್ನು ಒಳಗೊಂಡಿದ್ದು, ಭಾರತದಲ್ಲಿ ಅಧಿಕೃತವಾಗಿ ಇಂದು ತೆರೆಕಂಡಿದೆ. ಚಿತ್ರದಲ್ಲಿ ‘ನೀವು ಬದಲಾಗದೆ ಇದ್ದಲ್ಲಿ, ಯಾವುದೂ ಬದಲಾಗದು’ ಎಂಬ ಸಂದೇಶ ಸಾರಲಾಗಿದ್ದು, ಚಿತ್ರದ ಕಥಾನಾಯಕ ನ್ಯೂಟನ್ (ರಾಜ್ ಕುಮಾರ್ ರಾವ್) ಅವರು ಆದರ್ಶಗಳಲ್ಲಿ ನಂಬಿಕೆಯಿಟ್ಟ ವ್ಯಕ್ತಿಯಾ ನಟಿಸಿದ್ದಾರೆ. ನಕ್ಸಲೀಯರ ಪ್ರಾಬಲ್ಯದ ಪ್ರದೇಶಗಳಲ್ಲಿ ಆತ ಚುನಾವಣಾ ಕರ್ತವ್ಯಕ್ಕೆ ತೆರಳಿದಾಗ ಉಂಟಾಗುವ ತೊಂದರೆಗಳು, ನಕ್ಸಲರ ಬೆದರಿಕೆಯಿಂದ ಜೀವಭಯದಿಂದ ಮತದಾನದಲ್ಲಿ ಪಾಲ್ಗೊಳ್ಳದ ಗ್ರಾಮಸ್ಥರು ಅರ್ಹ ಅಭ್ಯರ್ಥಿಗೆ ಮತ ಚಲಾಯಿಸಲಾಗ ಘಟನಾವಳಿಗಳನ್ನು ಚಿತ್ರದಲ್ಲಿ ಅತ್ಯಂತ ಮನೋಜ್ಞವಾಗಿ ಬಿಂಬಿಸಲಾಗಿದೆ.
ನ್ಯೂಟನ್ ಚಿತ್ರವು ಮತದಾನ ಒಂದು ಪವಿತ್ರ ಕರ್ತವ್ಯವೆಂದು ಪರಿಗಣಿಸದ ವ್ಯಕ್ತಿಗಳಿಗೆ ಕಣ್ತೆರೆಸಲಿದೆ ಎಂದು ನಾಯಕನಟ ರಾಜ್ ಕುಮಾರ್ ರಾವ್ ಹೇಳಿಕೊಂಡಿದ್ದಾರೆ. ನ್ಯೂಟನ್ ಚಿತ್ರದ ಟ್ರೇಲರ್ಗೂ ಉತ್ತಮ ಪ್ರತಿಕ್ರಿಯೆ ದೊರೆತಿದೆ.
(ಎನ್.ಬಿ)