ಕರ್ನಾಟಕ

ಕೆ.ಆರ್.ಎಸ್ ಜಲಾಶಯದಲ್ಲಿ ಹಿಂಗಾರುಬೆಳೆಗೆ ನೀರು ಸಂಗ್ರಹಿಸಿಡಬೇಕಾದ ಅಗತ್ಯವಿದೆ : ಕೆ.ಎಸ್.ಪುಟ್ಟಣ್ಣಯ್ಯ

ರಾಜ್ಯ(ಮಂಡ್ಯ), ಸೆ.22:-  ಹಿಂಗಾರು ಬೆಳೆಗಾಗಿ ಕೆಆರ್‍ಎಸ್ ಜಲಾಶಯದಲ್ಲಿ ಹೆಚ್ಚು ನೀರು ಸಂಗ್ರಹಿಸಿಡಬೇಕಾದುದು ಅನಿವಾರ್ಯವಾಗಿದೆ ಎಂದು ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ರೈತರಿಗೆ ಕರೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೀರಿನ ಕೊರತೆಯಿಂದ ಜಿಲ್ಲೆಯಲ್ಲಿ ಮುಂಗಾರು ಬೆಳೆ ಸಂಪೂರ್ಣ ವಿಫಲವಾಗಿದೆ, ಸದ್ಯಕ್ಕೆ ಎಲ್ಲೆಡೆ ಉತ್ತಮ ಮಳೆಯಾಗುತ್ತಿರುವುದರಿಂದ ಜಲಾಶಯಗಳಿಗೆ ಹೆಚ್ಚು ನೀರು ಬರುತ್ತಿದೆ, ತಾಲೂಕಿನ ಮತ್ತು ಜಿಲ್ಲೆಯ ಎಲ್ಲಾ ಕೆರೆಗಳನ್ನು ಭರ್ತಿ ಮಾಡಿಕೊಂಡ ನಂತರ ವಾರಕ್ಕೊಮ್ಮೆ ನಾಲೆಗಳ ನೀರು ನಿಲ್ಲಿಸಿ ಕೆಆರ್‍ಎಸ್ ಜಲಾಶಯದಲ್ಲಿ ನೀರು ಸಂಗ್ರಹಿಸಿಡೋದು ಉತ್ತಮ. ಇದರಿಂದ, ಕಾವೇರಿ ಕಣಿವೆಯ ರೈತರು ಬೇಸಿಗೆಯಲ್ಲಿ ಕಬ್ಬು, ಭತ್ತ, ಬೆಳೆಯಲು ಅನುಕೂಲವಾಗುತ್ತದೆ, ಈ ನಿಟ್ಟಿನಲ್ಲಿ ಜಿಲ್ಲಾ ಉಸ್ತುವಾರಿ ಮಂತ್ರಿಗಳು ಮತ್ತು ನೀರಾವರಿ ಇಲಾಖೆಯ ಅಧಿಕಾರಿಗಳು ಸಭೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಮತ್ತು ರೈತರು ಇದಕ್ಕೆ ಸಂಪೂರ್ಣ ಸಹಕಾರ ನೀಡಬೇಕು ಎಂದರು.

ಹೇಮಾವತಿ ಜಲಾಶದಲ್ಲಿ 12 ಟಿಎಂಸಿ ನೀರು ಬಳಕೆಗೆ ಲಭ್ಯವಿದೆ ಇದರಲ್ಲಿ 6 ಟಿಎಂಸಿ ನೀರನ್ನು ಬಿಡಬೇಕು, ಇದರಿಂದ ಈ ವ್ಯಾಪ್ತಿಯ ಎಲ್ಲಾಕೆರೆಗಳನ್ನು ಸಂಪೂರ್ಣವಾಗಿ ಭರ್ತಿ ಮಾಡಿಕೊಳ್ಳಲು ಅನುಕೂಲವಾಗುತ್ತದೆ ಎಂದರು.

ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಇರುವ ರೈತರ ಸಾಲವನ್ನು ದೀರ್ಘಾವದಿ ಸಾಲಕ್ಕೆ ಬದಲಾವಣೆ ಮಾಡಬೇಕು, ಬ್ಯಾಂಕುಗಳಲ್ಲಿ ಕನಿಷ್ಠ 5ಸಾವಿರ ಠೇವಣಿ ಇಡಬೇಕು ಎಂಬ ನಿಯಮ ಅವೈಜ್ಞಾನಿಕವಾಗಿದ್ದು, ಇದನ್ನು ರದ್ದುಪಡಿಸಬೇಕೆಂದು ಅವರು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಸಿ.ಆರ್.ರಘು, ಸಿ.ವಿ.ರವಿ, ಚಿಕ್ಕಮರಳಿ ಚಂದ್ರು, ಬೋರೇಗೌಡ ಇದ್ದರು.  (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: