ಕರ್ನಾಟಕ

ಮರಿಯಾಲ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ನಿವ್ವಳ ಲಾಭ : ಲಿಂಗರಾಜು

ರಾಜ್ಯ(ಚಾಮರಾಜನಗರ) ಸೆ.22:- ಮರಿಯಾಲ ಹಾಲು ಉತ್ಪಾದಕರ ಸಹಕಾರ ಸಂಘವು 2016-17ನೇ ಸಾಲಿನಲ್ಲಿ 2 ಲಕ್ಷದ 7 ಸಾವಿರ ರೂ ನಿವ್ವಳ ಲಾಭಗಳಿಸಿದೆ ಎಂದು ಸಂಘದ ಅಧ್ಯಕ್ಷ ಲಿಂಗರಾಜು ತಿಳಿಸಿದರು.

ತಾಲೂಕಿನ ಮರಿಯಾಲ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘ 2016-17ನೇ ಸಾಲಿನ ಸರ್ವಸದಸ್ಯರ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಹಾಗೂ ರೈತ ಕಲ್ಯಾಣ ಟ್ರಸ್ಟ್ ನಿಂದ ವಿದ್ಯಾರ್ಥಿ ವೇತನವನ್ನು ವಿತರಿಸಿ ಮಾತನಾಡಿದರು. ಗ್ರಾಮದ ಹಾಲು ಉತ್ಪಾದಕರ ಸಂಘವು 2016-17ನೇ ಸಾಲಿನಲ್ಲಿ 50 ಲಕ್ಷ 20 ಸಾವಿರ ವೈವಾಟು ನಡೆಸಿ 2ಲಕ್ಷದ 7ಸಾವಿರ ನಿವಳಲಾಭಗಳಿಸಿ 98ಸಾವಿರದ 618ರೂ ಹಾಲು ಉತ್ಪಾದಕರಿಗೆ ಬೋನಸ್ ನೀಡಲಾಗುವುದು ಎಂದು ತಿಳಿಸಿದರು. ಸಭೆಯಲ್ಲಿ 8 ವಿದ್ಯಾರ್ಥಿಗಳಿಗೆ ಪ್ರೋತ್ಸಹ ಧನವನ್ನು ಕುಟುಂಬದವರಿಗೆ ಅಧ್ಯಕ್ಷರು ನೀಡಿದರು.

ಈ ಸಂದರ್ಭದಲ್ಲಿ ವಿಸ್ತರಾಣಾಧಿಕಾರಿ ಹೆಚ್,ಎಸ್.ಆನಂದ್‍ಕುಮಾರ್ , ಚಾ.ಮುಲ್ ನಿರ್ದೇಶಕ ಪ್ರಮೋದ ಶಂಕರಮೂರ್ತಿ, ಗ್ರಾಮದ ಮುಖಂಡ ಮಾಜಿ ಗೌಡಕೆ ಚಿಕ್ಕಲಿಂಗಪ್ಪ ಮತ್ತಿತರರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: