
ಕರ್ನಾಟಕ
ಅಂಗವಿಕಲ ಫಲಾನುಭವಿಗಳಿಗೆ ತ್ರಿಚಕ್ರ ವಾಹನ ವಿತರಣೆ
ರಾಜ್ಯ( ಚಾಮರಾಜನಗರ) ಸೆ.22:- ಲೋಕಸಭಾ ಸದಸ್ಯರ ನಿಧಿಯಿಂದ 10 ಮಂದಿ ಅಂಗವಿಕಲ ಫಲಾನುಭವಿಗಳಿಗೆ ತ್ರಿಚಕ್ರ ವಾಹನವನ್ನು ಜಿಲ್ಲಾಡಳಿತ ಭವನದ ಮುಂಭಾಗ ಸಂಸದ ಧೃವನಾರಾಯಣ ವಿತರಿಸಿದರು.
ಬಳಿಕ ಮಾತನಾಡಿದ ಅವರು ಲೋಕಸಭಾ ಸದಸ್ಯರ ನಿಧಿಯಿಂದ ಅಂಗವಿಕಲರಿಗೆ ಮೂರು ಚಕ್ರದ ವಾಹನವನ್ನು ವಿತರಿಸಲಾಗಿದೆ. ಪ್ರತಿ ವರ್ಷವೂ ಬರುವ ಅನುದಾನದಲ್ಲಿ ಚಾಮರಾಜನಗರ ಜಿಲ್ಲೆಯ 4 ತಾಲೂಕು ಮತ್ತು ಮೈಸೂರು ಜಿಲ್ಲೆಯ ನಾಲ್ಕು ಕ್ಷೇತ್ರಗಳಲ್ಲಿ 8 ರಿಂದ 10 ಮಂದಿಗೆ ಅಂಗವಿಕಲ ಫಲಾನುಭವಿಗಳಿಗೆ ತ್ರಿಚಕ್ರ ವಾಹನವನ್ನು ನೀಡುತ್ತ ಬಂದಿದ್ದೇವೆ. ಇನ್ನೂ ಹೆಚ್ಚಿನ ಬೇಡಿಕೆ ಇರುವುದರಿಂದ ಮುಂದಿನ ಅನುದಾನದಲ್ಲಿ ಬಿಡುಗಡೆ ಮಾಡಲಾಗುವುದು ಈ ವಾಹನಕ್ಕೆ ಸುಮಾರು 65 ಸಾವಿರ ವೆಚ್ಚವಾಗಲಿದೆ. ನಾವು ನೀಡುವ ವಾಹನವನ್ನು ಸದುಪಯೋಗ ಪಡಿಸಿಕೊಳ್ಳಿ. ಮುಂದಿನ ಅನುದಾನದಲ್ಲಿಯೂ ನೀಡಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶಾಸಕ ಪುಟ್ಟರಂಗಶೆಟ್ಟಿ, ಎ.ಪಿ.ಎಂ.ಸಿ.ಅಧ್ಯಕ್ಷ ಬಿ,ಕೆ. ರವಿಕುಮಾರ್, ಅಧಿಕಾರಿ ದಾಸ್, ಸಂಸದರ ಆಪ್ತ ಸಹಾಯಕ ಮನೋರಾಜ್ ಇನ್ನಿತರರು ಇದ್ದರು. (ಕೆ.ಎಸ್,ಎಸ್.ಎಚ್)