ಸುದ್ದಿ ಸಂಕ್ಷಿಪ್ತ
ಅತ್ಯುತ್ತಮ ಬೊಂಬೆ ಪ್ರದರ್ಶನ ಮತ್ತು ಫ್ಯಾಷನ್ ಶೋ
ಮೈಸೂರು,ಸೆ.22 : ಡಿ.ಟಿ.ಎಸ್ ಫೌಂಡೇಶನ್ ಪ್ರಯೋಜಕತ್ವದಲ್ಲಿ ಜನನಿ ಟ್ರಸ್ಟ್ ನಿಂದ ದಸರಾ ಮಹೋತ್ಸವದಂಗವಾಗಿ ಅತ್ಯುತ್ತಮ ಬೊಂಬೆ ಪ್ರದರ್ಶನಕ್ಕೆ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಪ್ರಶಸ್ತಿ ಬಹುಮಾನ ಮತ್ತು ದಸರಾ ನಾರಿ ಫ್ಯಾಷನ್ ಷೋ ಅನ್ನು ಆಯೋಜಿಸಲಾಗಿದೆ. ಫ್ಯಾಷನ್ ಶೋನಲ್ಲಿ 18 ರಿಂದ 80 ವಯೋಮಾನದವರು ಪಾಲ್ಗೊಳ್ಳಬಹುದು. ಮೈಸೂರು ಸಿಲ್ಕ್ ಧರಿಸಿ ಮೈಸೂರು ಮಲ್ಲಿಗೆ ಮುಡಿದು 2017ರ ಮೈಸೂರು ದಸರಾ ಲಾಂಛನವನ್ನು ಪ್ರದರ್ಶಿಸಬೇಕು. ಮಾಹಿತಿಗಾಗಿ ಮೊ.ನಂ. 9844145502, 9448742555, 9141537956 ಅನ್ನು ಸಂಪರ್ಕಿಸಬಹುದು. (ಕೆ.ಎಂ.ಆರ್)