ಸುದ್ದಿ ಸಂಕ್ಷಿಪ್ತ
ಮನೆ ಮನೆಗೆ ಕಾಂಗ್ರೆಸ್ ಗೆ ಸೆ.23ರಂದು ಚಾಲನೆ
ಮೈಸೂರು,ಸೆ.22 : ಮೈಸೂರು ಜಿಲ್ಲಾ ಕಾಂಗ್ರೆಸ್ ಸಮಿತಿಯು ಸೆ.23 ರಂದು ಬೆಳಗ್ಗೆ 11.30ಕ್ಕೆ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಅರಳಿಕಟ್ಟೆ ನನ್ನೇಶ್ವರ ದೇವಸ್ಥಾನದ ಎದುರು, ಮನೆ ಮನೆಗೆ ಕಾಂಗ್ರೆಸ್ ಚಾಲನಾ ಸಮಾರಂಭವನ್ನು ಆಯೋಜಿಸಿದೆ.
ಕಾರ್ಯಕ್ರಮದಲ್ಲಿ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ, ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯ್ ಕುಮಾರ್, ಮುಖಂಡರಾದ ಡಾ.ಯತೀಂದ್ರ ಸಿದ್ದರಾಮಯ್ಯ, ಸತ್ಯನಾರಾಯಣ್, ಕೆ.ಮರೀಗೌಡ ಮೊದಲಾದವರು ಪಾಲ್ಗೊಳ್ಳುವರು.
ನಂಜನಗೂಡಿನ – ಹಂಪಾಪುರ ಗ್ರಾಮದಲ್ಲಿ, ವರುಣಾ – ಉತ್ತನಹಳ್ಳಿ ಗ್ರಾಮ, ಹೆಚ್.ಡಿ.ಕೋಟಿ – ಕುಡುಸೋಗೆ ಗ್ರಾಮ, ಹುಣಸೂರು – ಕಲ್ಕುಣಿಕೆ ಗ್ರಾಮ, ಪಿರಿಯಾಪಟ್ಟಣ – ಅಬ್ಬೂರು ಗ್ರಾ, ಕೆ.ಆರ್.ನಗರ – ಲಾಲನಹಳ್ಳಿ , ಟಿ.ನರಸೀಪುರ – ಮಾವಿನಹಳ್ಳಿಯಲ್ಲಿ ಕಾರ್ಯಕ್ರಮವನ್ನು ಆಯೋಜಿಸಿದೆ. (ಕೆ.ಎಂ.ಆರ್)