
ಕರ್ನಾಟಕಸುದ್ದಿ ಸಂಕ್ಷಿಪ್ತ
ಉದ್ಯೋಗ ವಿನಿಮಯ ನೋಂದಣಿ ನವೀಕರಣಕ್ಕೆ ಮನವಿ
ಮಂಡ್ಯ, ಸೆ.22 : ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಮಂಡ್ಯ ಇಲ್ಲಿ ಉದ್ಯೋಗ ಬಯಸಿ ವಿವಿಧ ವಿದ್ಯಾರ್ಹತೆಗಳಿಗೆ ಹೆಸರು ನೊಂದಾಯಿಸಿಕೊಂಡಿರುವ ಮಂಡ್ಯ ಜಿಲ್ಲೆಯ ಅಭ್ಯರ್ಥಿಗಳು ಹೆಸರು ನೊಂದಾಯಿಸಿಕೊಂಡ ಮಾಹೆ, ವರ್ಷದಿಂದ ಪ್ರತಿ ಮೂರು ವರ್ಷಗಳಿಗೊಮ್ಮೆ ತಮ್ಮ ನೊಂದಣಿಯನ್ನು ನವೀಕರಿಸಿಕೊಳ್ಳಬೇಕಾಗಿರುತ್ತದೆ.
ನೊಂದಣಿ ನವೀಕರಣವನ್ನು ಖುದ್ದಾಗಿ ಪತ್ರ ಸಲ್ಲಿಸಿ ಅಥವಾ ಅಂಚೆ ಮೂಲಕ ಜೋಡಿ ಅಂಚೆ ಕಾರ್ಡಿನಲ್ಲಿ ಕೋರಿಕೆ ಸಲ್ಲಿಸಿ ಮಾಡಿಸಬಹುದಾಗಿರುತ್ತದೆ. ನೊಂದಣಿ ನವೀಕರಣದ ಸೂಚಿತ ದಿನಾಂಕದ ಮುಂದಿನ ಎರಡು ತಿಂಗಳು ನವೀಕರಣದ ಗ್ರೇಸ್ ಅವಧಿಯಾಗಿರುತ್ತದೆ. ಜುಲೈ-2017 ರ ಅಂತ್ಯಕ್ಕೆ ನವೀಕರಿಸಿಕೊಳ್ಳಬೇಕಾದ ಅಭ್ಯರ್ಥಿಗಳು ಸರ್ಕಾರಿ ರಜಾದಿನಗಳು ಮತ್ತು ತಿಂಗಳ ಕೊನೆಯ ದಿನವನ್ನು ಹೊರತು ಪಡಿಸಿ ಸೆಪ್ಟೆಂಬರ್-2017 ರ ಒಳಗೆ ನವೀಕರಿಸಿಕೊಳ್ಳಬಹುದಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 08232-220126 ಅನ್ನು ಸಂಪರ್ಕಿಸಬಹುದು.
(ಎನ್.ಬಿ)