ಮೈಸೂರು

ಪೆಟ್ರೋಲ್ ಬಂಕ್ ಬಂದ್: ಸಾರ್ವಜನಿಕರ ಪರದಾಟ

ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ‌ ಪೆಟ್ರೋಲ್ ಬಂಕ್ ಮಾಲೀಕರು ನಡೆಸುತ್ತಿರುವ ಬಂದ್ ಗೆ ಮೈಸೂರಿನ ನಾಗರಿಕರು ಹೈರಾಣಾಗಿದ್ದಾರೆ.

ಬುಧವಾರ ಮಧ್ಯರಾತ್ರಿಯವರೆಗೂ ಪೆಟ್ರೋಲ್ ಬಂಕ್ ಮುಂಭಾಗ ಸಾಲುಗಟ್ಟಿ ನಿಂತು ಪೆಟ್ರೋಲ್ ತುಂಬಿಸಿಕೊಳ್ಳಲು ಹರಸಾಹಸ ಪಟ್ಟಿದ್ದಾರೆ. ಈ ವೇಳೆ ಗಲಾಟೆ ಗದ್ದಲ ಜರುಗದಂತೆ ಸ್ಥಳದಲ್ಲೇ ಪೊಲೀಸ್ ಪೇದೆಯೊಬ್ಬರನ್ನು ನಿಯೋಜನೆಗೊಳಿಸಲಾಗಿತ್ತು. ಮೈಸೂರಿನ ಸರಸ್ವತಿಪುರಂನಲ್ಲಿರುವ ಟಿ.ಕೆ.ಲೇಔಟ್‍ನಲ್ಲಿ, ಪೊಲೀಸರ ಸಮ್ಮುಖದಲ್ಲಿ ಸಾಲುಗಟ್ಟಿ ಪೆಟ್ರೋಲ್ ತುಂಬಿಸಿಕೊಂಡು ಹೋಗಲಾಗಿದೆ. ಇದು ಮುಷ್ಕರದ ಪರಿಣಾಮ ಆದರೂ ಇದು ಮಧ್ಯರಾತ್ರಿ 12ರ ವೇಳೆಯಲ್ಲಿ ನಡೆದಿರೋದು ವಿಶೇಷ.

petrol-2

Leave a Reply

comments

Related Articles

error: