ಮೈಸೂರು

ಕ್ಯಾಂಟರ್ ಹರಿದು 12ಕ್ಕೂ ಹೆಚ್ಚು ಕುರಿಗಳ ಸಾವು

ಮೈಸೂರು,ಸೆ.22:-ಕ್ಯಾಂಟರ್ ಹರಿದು 12ಕ್ಕೂ  ಹೆಚ್ಚು ಕುರಿಗಳ ಸಾವನ್ನಪ್ಪಿದ ಘಟನೆ ಮೈಸೂರು ಜಿಲ್ಲೆ ಹುಣಸೂರು ಪಟ್ಟಣದ ಬೈಪಾಸ್ ಹೆದ್ದಾರಿಯಲ್ಲಿ  ಶುಕ್ರವಾರ  ನಡೆದಿದೆ.

ಗಾವಡಗೆರೆ ಹೋಬಳಿ ಸೀರೇನಹಳ್ಳಿಯ ನಾಗರಾಜ್ ಅವರಿಗೆ ಸೇರಿದ ಕುರಿಗಳು ಸಾವನ್ನಪ್ಪಿದ್ದು,ರಸ್ತೆ ದಾಟುತ್ತಿದ್ದ ವೇಳೆ ದುರ್ಘಟನೆ ನಡೆದಿದೆ.ಮಡಿಕೇರಿಯ ಮುಖೇಶ್ ಎಂಬುವವರಿಗೆ ಸೇರಿದ ಕ್ಯಾಂಟರ್ ವಾಹನ ಇದಾಗಿದ್ದು, ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಆರ್.ವಿ,ಎಸ್.ಎಚ್)

Leave a Reply

comments

Related Articles

error: