ಮೈಸೂರು

ಟಿಪ್ಪು ಜಯಂತಿ ಆಚರಿಸಬೇಕಾದ ಔಚಿತ್ಯವೇನು: ಹೈಕೋರ್ಟ್ ಪ್ರಶ್ನೆ

ಸರ್ಕಾರದ ವತಿಯಿಂದ ಟಿಪ್ಪು ಸುಲ್ತಾನ್ ಜಯಂತಿ ಆಚರಿಸುವ ಔಚಿತ್ಯವೇನು? ಭಾರತದಲ್ಲಿ ಬಂದು ಹೋದ ಇತರ ರಾಜರಂತೆ ಆತನೂ ಓರ್ವ ರಾಜನಷ್ಟೆ. ಒಬ್ಬ ಸ್ವಾತಂತ್ರ್ಯ ಹೋರಾಟಗಾರನಲ್ಲ ಎಂದು ವ್ಯಾಖ್ಯಾನಿಸುವ ಮೂಲಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್.ಕೆ. ಮುಖರ್ಜಿ ಅವರು ರಾಜ್ಯ ಸರ್ಕಾರದ ನಿರ್ಧಾರಕ್ಕೆ ಹೈಕೋರ್ಟ್‍ ಸಹಮತವಿಲ್ಲ ಎಂದು ಎಂದಿದ್ದಾರೆ.

ಮಂಜುನಾಥ್ ಎಂಬುವರು ರಾಜ್ಯ ಸರ್ಕಾರದ ಕನ್ನಡ ಸಂಸ್ಕೃತಿ ಇಲಾಖೆ ವತಿಯಿಂದ ನ.10 ರಂದು ನಡೆಸಲು ಉದ್ದೇಶಿಸಿರುವ ಟಿಪ್ಪು ಸುಲ್ತಾನ್ ಜಯಂತಿಗೆ ತಡೆಯಾಜ್ಞೆ ಕೋರಿ ಹೈಕೋರ್ಟ್ ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.

ಬುಧವಾರ ಪಿಐಎಲ್ ವಿಚಾರಣೆ ತೆಗೆದುಕೊಂಡ ನ್ಯಾಯಮೂರ್ತಿಗಳು, ಟಿಪ್ಪು ಸುಲ್ತಾನ್ ಆಗಿನ ಸಂಸ್ಥಾನವೊಂದರ ರಾಜ. ಸ್ವಾತಂತ್ರ್ಯ ಹೋರಾಟಗಾರನಲ್ಲ. ಹೈದರಾಬಾದ್ ನಿಜಾಮರ ಮೇಲೆ ಬ್ರಿರಟಿಷರು ದಾಳಿ ಮಾಡಿದಾಗ ತನ್ನ ರಕ್ಷಣೆಗಾಗಿ ಪ್ರತಿದಾಳಿ ಮಾಡಿದ್ದಾನೆ. ಹಾಗೆಂದು ನಿಜಾಮರನ್ನು ಸ್ವಾತಂತ್ರ್ಯ ಹೋರಾಟಗಾರ ಎಂದು ಭಾವಿಸಲು ಸಾಧ್ಯವೇ ಎಂದು ಪ್ರಶ್ನಿಸಿದರು.

ಇತರ ರಾಜರಂತೆ ಟಿಪ್ಪು ಕೂಡಾ ಸಂಸ್ಥಾನ ಉಳಿಸಿಕೊಳ್ಳಲು ಯುದ್ಧ ಮಾಡಿದ್ದಾರೆ. ಟಿಪ್ಪು ಶಾಂತಿಯಿಂದ ವಿರಮಿಸಲಿ. ಇಂತಹ ಆಚರಣೆಗಳಿಗೆ ಇಂಬು ಕೊಡುವ ಮೂಲಕ ರಾಜ್ಯ ಸರ್ಕಾರವೇ ಅಶಾಂತಿಗೆ ಪ್ರಚೋದನೆ ಕೊಡುವುದು ಬೇಡ ಎಂದು ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿ, ವಿಚಾರಣೆಯನ್ನು ಮುಂದೂಡಿದರು.

Leave a Reply

comments

Related Articles

error: