ಮೈಸೂರು

ಟೈಗರ್ ಕಪ್ ಕ್ರಿಕೆಟ್ ಪಂದ್ಯಾವಳಿ ಆರಂಭ

ಸೈಕಲ್ ಪ್ಯೂರ್ ಅಗರಬತ್ತೀಸ್ ವತಿಯಿಂದ ಬುಧವಾರದಿಂದ ಆರಂಭಗೊಂಡ ಟೈಗರ್ ಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಮೊದಲ ದಿನ ವಿಜಯನಗರದ ಸಂತ ಜೋಸೆಫ್ ಸೆಂಟ್ರಲ್ ಶಾಲೆ ಮತ್ತು ಜಯಲಕ್ಷ್ಮೀಪುರಂನ ಸಂತ ಜೋಸೆಫ್ ಪ್ರೌಢಶಾಲೆಗಳು ಉತ್ತಮ ಆಟ ಆರಂಭಿಸಿವೆ.

ಎಸ್‍ಜೆಸಿಇ ಕ್ರೀಡಾಂಗಣದಲ್ಲಿ ನಡೆದ ಮೊದಲ ಪಂದ್ಯದಲ್ಲಿ ವಿಜಯನಗರದ ಸಂತ ಜೋಸೆಫ್ ಸೆಂಟ್ರಲ್ ಶಾಲೆ ತಂಡ ಅಮೃತ ವಿದ್ಯಾಲಯಂ ತಂಡವನ್ನು 77 ರನ್‍ಗಳಿಂದ ಪರಾಭವಗೊಳಿಸಿತು. ಮೊದಲು ಬ್ಯಾಟಿಂಗ್ ನಡೆಸಿದ ಸಂತ ಜೋಸೆಫ್ ಸೆಂಟ್ರಲ್ ಶಾಲೆ 30 ಓವರ್‍ಗಳಲ್ಲಿ 5 ವಿಕೆಟ್ ನಷ್ಟಕ್ಕೆ 173 ರನ್ ಗಳಿಸಿತು. ಅಮೃತ ವಿದ್ಯಾಲಯಂ ತಂಡ 17. 1 ಓವರ್‍ಗಳಲ್ಲಿ 96 ರನ್‍ಗಳಿಗೆ ಸರ್ವಪತನ ಕಾಣುವ ಮೂಲಕ ಸೋಲುಂಡಿತು.

64 ರನ್‍ ಗಳಿಸಿ, 3 ವಿಕೆಟ್ ಪಡೆದ ಸಂತ ಜೋಸೆಫ್ ಸೆಂಟ್ರಲ್ ಶಾಲೆಯ ಅಭಿನಿತ್ ಗೌಳಿ ಟೈಗರ್ ಆಫ್‍ ದಿ ಮ್ಯಾಚ್ ಪ್ರಶಸ್ತಿ ಪಡೆದರು.

ಮಧ್ಯಾಹ್ನ ನಡೆದ ಎರಡನೇ ಪಂದ್ಯದಲ್ಲಿ ಜಯಲಕ್ಷ್ಮೀಪುರಂನ ಸಂತ ಜೋಸೆಫ್ ಪ್ರೌಢಶಾಲೆ ತಂಡ ಕೌಟಿಲ್ಯ ವಿದ್ಯಾಲಯ ತಂಡವನ್ನು 46 ರನ್‍ಗಳ ಅಂತರದಿಂದ ಸೋಲಿಸಿ ಜಯ ಗಳಿಸಿತು. ಸಂತ ಜೋಸೆಫ್ ಪ್ರೌಢಶಾಲೆಯ ಬಾಲಾಸಚಿತ್ 19 ರನ್ ಗಳಿಸಿ, 4 ವಿಕೆಟ್ಗಳನ್ನೂ ಪಡೆದು ಟೈಗರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.

tiger-cup

Leave a Reply

comments

Related Articles

error: