ಸುದ್ದಿ ಸಂಕ್ಷಿಪ್ತ

ಕೃಷಿ ಹೊಂಡಗಳ ಸುತ್ತಲೂ ರಕ್ಷಣಾತ್ಮಕ ಕ್ರಮ ವಹಿಸಲು ಕೃಷಿ ಇಲಾಖೆ ಮನವಿ

ಚಾಮರಾಜನಗರ, ಸೆ. 23:- ಕೃಷಿಭಾಗ್ಯ ಯೋಜನೆಯಡಿ ರೈತರಿಗಾಗಿ ನಿರ್ಮಿಸಲಾಗಿರುವ ಕೃಷಿ ಹೊಂಡಗಳ ಸುತ್ತ ರಕ್ಷಣಾತ್ಮಕ ಕ್ರಮಗಳನ್ನು ಅನುಸರಿಸುವಂತೆ ಕೃಷಿ ಇಲಾಖೆ ಜಂಟಿ ನಿರ್ದೇಶಕರಾದ ತಿರುಮಲೇಶ್ ಮನವಿ ಮಾಡಿದ್ದಾರೆ.

ಕೃಷಿ ಹೊಂಡ ಕಾಮಗಾರಿ ಪೂರ್ಣವಾದ ನಂತರ  ಮಳೆ ನೀರು ತುಂಬಿ ಮಣ್ಣಿನಲ್ಲಿ ಇಂಗುವುದನ್ನು ತಡೆಯುವ ಸಲುವಾಗಿ ಪಾಲಿಥೀನ್ ಹೊದಿಕೆಯನ್ನು ಕೃಷಿಹೊಂಡಗಳಿಗೆ ಹಾಕಲಾಗಿದೆ. ಜಿಲ್ಲೆಯಲ್ಲಿ ಇದುವರೆಗೆ 4489 ಕೃಷಿ  ಹೊಂಡಗಳ ಕಾಮಗಾರಿ ಕೆಲಸ ಪೂರ್ಣಗೊಂಡಿದ್ದು 1904 ಕೃಷಿಹೊಂಡಗಳಿಗೆ ಪಾಲಿಥೀನ್ ಹೊದಿಕೆ ಹಾಕಲಾಗಿದೆ.

ಪ್ರಸ್ತುತ ಮಳೆ ಹೆಚ್ಚಾಗುತ್ತಿರುವ ಕಾರಣ ಕೃಷಿಹೊಂಡಗಳಲ್ಲಿ 9 ಅಡಿಗೂ ಹೆಚ್ಚು ನೀರು ಸಂಗ್ರಹಣೆಯಾಗಿದೆ. ಈ ಹಿನ್ನೆಲೆಯಲ್ಲಿ ಕೃಷಿಹೊಂಡದ ಸುತ್ತಲು ಮುನ್ನೆಚರಿಕೆಯಾಗಿ ಬೇಲಿಗಳನ್ನು ನಿರ್ಮಿಸಬೇಕು  ಈ ಮೂಲಕ ಜಾನುವಾರುಗಳು ಮಕ್ಕಳು ಹೊಂಡ ಹತ್ತಿರ ಪ್ರವೇಶಿಸದಂತೆ ತಡೆಯಬೇಕು. ಕೃಷಿಹೊಂಡಗಳಿಗೆ ಟೈರಿನ ಟ್ಯೂಬ್‍ಗಳು, ಉದ್ದವಾದ ಹಗ್ಗವನ್ನು ಕಟ್ಟಿ ಹೊಂಡಗಳಿಗೆ ಬಿಡಬೇಕು. ಕೃಷಿಹೊಂಡಗಳ ಸುತ್ತಲು ನೆರಳುಪರದೆ ಅಳವಡಿಸಬೇಕು. ನೆರಳುಪರದೆ ಅಳವಡಿಸುವ ರೈತರಿಗೆ ಶೇ.50.ರಷ್ಟು ಸಹಾಯಧನ ನೀಡಲಾಗುತ್ತದೆ. ರೈತರು ಹತ್ತಿರದ ರೈತಸಂಪರ್ಕ ಕೇಂದ್ರಗಳನ್ನು ಸಂಪರ್ಕಿಸಿ ಮಾರ್ಗದರ್ಶನ ಪಡೆಯಬೇಕು. ಕೃಷಿಹೊಂಡಗಳ ಸುತ್ತಲು ರಕ್ಷಣಾತ್ಮಕ ಕ್ರಮಗಳನ್ನು ಕೈಗೊಳ್ಳುವ ಮೂಲಕ ಮುನ್ನೆಚರಿಕೆ ವಿಧಾನಗಳನ್ನು ಪಾಲಿಸುವಂತೆ ಜಂಟಿಕೃಷಿ ನಿರ್ದೇಶಕರಾದ ತಿರುಮಲೇಶ್ ತಿಳಿಸಿದ್ದಾರೆ. (ಆರ್.ವಿ.ಎಸ್,ಎಸ್.ಎಚ್)

Leave a Reply

comments

Related Articles

error: