ಕರ್ನಾಟಕಪ್ರಮುಖ ಸುದ್ದಿ

ಸರಕು ಮತ್ತು ಸೇವಾ ತೆರಿಗೆ – ಜಿಎಸ್‍ಟಿ ತರಬೇತಿ ಶಿಬಿರ

ಬೆಂಗಳೂರು, ಸೆ.23 : ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ನಿರುದ್ಯೋಗ ಯುವಕ-ಯುವತಿಯರಿಗಾಗಿ ಉದ್ಯೋಗ ಒದಗಿಸಿಕೊಡುವ ನಿಟ್ಟಿನಲ್ಲಿ ಸರಕು ಮತ್ತು ಸೇವಾ ತೆರಿಗೆ – ಜಿ.ಎಸ್.ಟಿ. ತರಬೇತಿ ಶಿಬಿರವನ್ನು ಸೆ.25 ರಿಂದ 28 ರವರೆಗೆ ಬೆಂಗಳೂರಿನ ರಾಜ್ಯ ಯುವ ಕೇಂದ್ರದ 3ನೇ ಮಹಡಿಯಲ್ಲಿ ಏರ್ಪಡಿಸಿದೆ.

ಈ ತರಬೇತಿ ಶಿಬಿರವು 4 ದಿನಗಳ ಕಾಲ ನಡೆಯುತ್ತದೆ. ವಯೋಮಿತಿ 21 ರಿಂದ 35 ವರ್ಷದೊಳಗಿರಬೇಕು. ವಿದ್ಯಾರ್ಹತೆ: ಬಿಕಾಂ ಪದವಿ ಹೊಂದಿರಬೇಕು. ಹೊರ ಜಿಲ್ಲೆಗಳಿಂದ ಆಗಮಿಸುವ ಶಿಬಿರಾರ್ಥಿಗಳಿಗೆ ಸಾಮಾನ್ಯ ವಸತಿ ವ್ಯವಸ್ಥೆ ಕಲ್ಪಿಸಲಾಗುವುದು. ಆಸಕ್ತರು ಎಸ್.ಎಸ್.ಎಲ್.ಸಿ. ಅಂಕಪಟ್ಟಿಯೊಂದಿಗೆ, ಉಪ ನಿರ್ದೇಶಕರು, ರಾಜ್ಯ ಯುವ ಕೇಂದ್ರ, ನೃಪತುಂಗ ರಸ್ತೆ, ಬೆಂಗಳೂರು-01. ದೂರವಾಣಿ ಸಂಖ್ಯೆ: 080-22214911/9036313131 ಅನ್ನು ಸಂಪರ್ಕಿಸಿ ನೋಂದಾಯಿಸಬಹುದು.

(ಎನ್.ಬಿ)

Leave a Reply

comments

Related Articles

error: