ಮೈಸೂರು

ಮೈಸೂರು ಶಾಪಿಂಗ್ ಫೆಸ್ಟಿವಲ್ ಸಮಾರೋಪ ನ.6ರಂದು

ಮೈಸೂರು ಶಾಪಿಂಗ್ ಫೆಸ್ಟಿವಲ್ ಸಮಾರೋಪ ಸಮಾರಂಭವನ್ನು ನ.6ರಂದು ಆಯೋಜಿಸಲಾಗಿದೆ ಎಂದು ಶಾಪಿಂಗ್ ಫೆಸ್ಟಿವಲ್‍ನ ಅಧ್ಯಕ್ಷ ಬಿ.ಎಸ್. ಪ್ರಶಾಂತ್ ತಿಳಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಬುಧವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಅಂದು ಸಂಜೆ 6.30ಕ್ಕೆ ಮಾನಸಗಂಗೋತ್ರಿಯ ಬಯಲು ರಂಗಮಂದಿರದಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ನಟ ಕಿಚ್ಚ ಸುದೀಪ್ ವಿಶೇಷ ಅತಿಥಿಯಾಗಿ ಆಗಮಿಸಲಿದ್ದಾರೆ. ಕೇಂದ್ರ ಸಚಿವ ಅನಂತ್‍ ಕುಮಾರ್, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್, ಮಾಜಿ ಸಚಿವ ಎಸ್‍.ಎ. ರಾಮದಾಸ್, ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಮಾರಂಭದಲ್ಲಿ ಜಿಲ್ಲಾಧಿಕಾರಿ ಡಿ.ರಂದೀಪ್, ನಗರ ಪೊಲೀಸ್ ಆಯುಕ್ತ ರವಿ ಡಿ.ಚನ್ನಣ್ಣನವರ್ ಅವರನ್ನು ಸನ್ಮಾನಿಸಲಾಗುವುದು ಎಂದರು.

ಓರ್ವ ಅದೃಷ್ಟಶಾಲಿ ವಿಜೇತರಿಗೆ ಬಂಪರ್ ಬಹುಮಾನವಾಗಿ ಮರ್ಸಿಡಿಸ್ ಬೆನ್ಜ್ ಕಾರಿನ ಕೀಯನ್ನು ಕಿಚ್ಚ ಸುದೀಪ್ ಅವರು ನೀಡಲಿದ್ದಾರೆ. ಗಾಯಕ ಕುನಾಲ್ ಗಾಂಜಾವಾಲಾ ಮತ್ತು ತಂಡದವರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ ಎಂದರು.

ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ. ನಾರಾಯಣ ಗೌಡ, ಮೈಸೂರು ಟ್ರಾವೆಲ್ಸ್ ಸಂಘದ ಅಧ್ಯಕ್ಷ ಜಯಕುಮಾರ್, ಚಿರಾಗ್ ಆಡ್ಸ್‍ನ ವಿವೇಕ್, ಕೆ.ಎಚ್. ಕಿರಣ್ ಉಪಸ್ಥಿತರಿದ್ದರು.

 

Leave a Reply

comments

Related Articles

error: