ದೇಶಪ್ರಮುಖ ಸುದ್ದಿ

ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಮತ್ತಷ್ಟು ದಾಖಲೆ : ನ.18ಕ್ಕೆ ವಿಚಾರಣೆ ಮುಂದೂಡಿಕೆ

ನವದೆಹಲಿ, ಸೆ.23 (ಪ್ರಮುಖ ಸುದ್ದಿ) : ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಪಾಲ್ಗೊಂಡಿದ್ದಾರೆನ್ನಲಾದ ನ್ಯಾಷನಲ್ ಹೆರಾಲ್ಡ್ ಹಣಕಾಸು ಮತ್ತು ಶೇರುಗಳನ್ನು ದುರುಪಯೋಗ ಪ್ರಕರಣದ ವಿಚಾರಣೆಯನ್ನು ಪಟಿಯಾಲ ಕೋರ್ಟ್‍ ಇಂದು ಮತ್ತೆ ನ.18ಕ್ಕೆ ಮುಂದೂಡಿದೆ.

ಈ ಪ್ರಕರಣದಲ್ಲಿ ಸೋನಿಯಾ, ರಾಹುಲ್ ಮಾತ್ರವಲ್ಲದೆ ಕಾಂಗ್ರೆಸ್ ಪಕ್ಷದ ಖಜಾಂಚಿ ಮೋತಿಲಾಲ್ ವೋರಾ, ಪಕ್ಷದ ಪ್ರಮುಖ ನಾಯಕರಾದ ಆಸ್ಕರ್ ಫರ್ನಾಂಡಿಸ್, ಸುಮನ್ ದುಬೇ, ಸ್ಯಾಮ್ ಪಿತ್ರೋಡಾ ಅವರೂ ಆರೋಪಿಗಳಾಗಿದ್ದಾರೆ.

ಬಿಜೆಪಿ ನಾಯಕ ಸುಬ್ರಹ್ಮಣಿಯನ್ ಸ್ವಾಮಿ ಅವರ ಅರ್ಜಿಯ ಆಧಾರದ ಮೇಲೆ ಕೋರ್ಟ್ ವಿಚಾರಣೆ ನಡೆಸುತ್ತಿದ್ದು, ಕಳೆದ ಜುಲೈ 1 ರಂದು ದೆಹಲಿ ಈ ಪ್ರಕರಣದಲ್ಲಿ ಸೋನಿಯಾ ಮತ್ತು ರಾಹುಲ್ ಅವರಿಂದ ವಿವರಣೆ ಕೋರಿತ್ತು. ಜುಲೈ 22ರಂದು ಸೋನಿಯಾ ಮತ್ತು ರಾಹುಲ್ ಅವರು ತಮ್ಮ ಪ್ರತಿಕ್ರಿಯೆಯನ್ನು ಕೋರ್ಟ್‍ನಲ್ಲಿ ದಾಖಲಿಸಿದ್ದರು.

ಮತ್ತಷ್ಟು ದಾಖಲೆ :

ಈ ನಡುವೆ ಸುಬ್ರಹ್ಮಣ್ಯನ್ ಸ್ವಾಮಿ ಅವರು ತಾವು ಸಲ್ಲಿಸಿದ್ದ ಅರ್ಜಿಗೆ ಮತ್ತಷ್ಟು ಪೂರಕ ದಾಖಲೆ ಒದಗಿಸಿದ್ದು, ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಒಡೆತನ ಹೊಂದಿರುವ ಅಸೋಸಿಯೇಟೆಡ್ ಜರ್ನಲ್ ಲಿಮಿಟೆಡ್ ದಾಖಲೆಗಳು, ಲೆಡ್ಜರ್‍ ಪುಸ್ತಕರಿಂದ ಆರಿಸಿದ ಪುಟಗಳು, ರಿಜಿಸ್ಟ್ರಾರ್‍ ಆಫ್‍ ಕಂಪನೀಸ್‍ನ ಬ್ಯಾಂಕ್‍ ಸ್ಟೇಟ್‍ಮೆಂಟ್‍, ಸಾಲ ಪಡೆದು ಅದನ್ನು ಪರಿವರ್ತನೆ ಮಾಡಿ ದುರುಪಯೋಗ ಮಾಡಿಕೊಂಡಿರುವ ದಾಖಲೆಗಳು, ಬ್ಯಾಲೆನ್ಸ್ ಶೀಟ್, ಲಾಭ-ನಷ್ಟ ವಿವರ, ಆಡಿಟರ್ಸ್ ವರದಿ ಮುಂತಾದವುಗಳನ್ನು ಕೋರ್ಟ್‍ಗೆ ಸಲ್ಲಿಸಿದ್ದಾರೆ ಎನ್ನಲಾಗಿದೆ.

5 ಸಾವಿರ ಕೋಟಿ ರೂ ಹಗರಣ !

ಕಳೆದ 2012ರಿಂದ ವಿಚಾರಣೆ ನಡೆಯುತ್ತಿರುವ ಈ ಪ್ರಕಣದಲ್ಲಿ, ಕಾಂಗ್ರೆಸ್ ಪಕ್ಷಕ್ಕೆ ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್‍ನಿಂದ 90.25 ಕೋಟಿ ಬಡ್ಡಿ ರಹಿತ ಸಾಲ ಪಡೆದು ವಾಪಸ್ ಮಾಡಿಲ್ಲ. ಈ ಮೂಲಕ ಪತ್ರಿಕೆಯ ಹಣವನ್ನು ದುರುಪಯೋಗ ಮಾಡಿಕೊಳ್ಳಲಾಗಿದೆ. ನವೆಂಬರ್ 2010ರಲ್ಲಿ ಈ ಹಗರಣ ನಡೆದಿದ್ದು ಅಸೋಯೇಟೆಡ್ ಜರ್ನಲ್‍ ಲಿಮಿಡೆಟ್‍ಗೆ ಸೇರಿದ ಸುಮಾರು 5 ಸಾವಿರ ಕೋಟಿ ರೂ. ಬೆಲೆಬಾಳುವ ಶೇರುಗಳನ್ನು ವರ್ಗಯಿಸಿಕೊಂಡ ಆರೋಪವಿದೆ. ಈ ವೇಳೆ ಸೋನಿಯಾ ಮತ್ತು ರಾಹುಲ್ ಅವರು ಯಂಗ್‍ಇಂಡಿಯಾ ಕಂಪನಿಯ ನಿರ್ದೇಶಕರಾಗಿದ್ದ ಕಾರಣ ಈ ಪ್ರಕಣದಲ್ಲಿ ಪ್ರಮುಖ ಆರೋಪ ಎದುರಿಸುತ್ತಿದ್ದಾರೆ.

(ಎನ್.ಬಿ)

Leave a Reply

comments

Related Articles

error: