Uncategorizedಮನರಂಜನೆ

ಅಕ್ಟೋಬರ್ 15 ರಿಂದ ಬಿಗ್ ಬಾಸ್ ಆಟ ಶುರು

ಬೆಂಗಳೂರು,ಸೆ.23-ರಿಯಾಲಿಟಿ ಶೋಗಳಲ್ಲಿ ಅತಿ ಹೆಚ್ಚು ಪ್ರೇಕ್ಷರನ್ನು ಹೊಂದಿರುವ ಅತ್ಯಂತ ಜನಪ್ರಿಯ ರಿಯಾಲಿಟಿ ಶೋಗಳಲ್ಲಿ ಒಂದಾದ ಬಿಗ್ ಬಾಸ್ ಸೀಸನ್ 5 ಪ್ರಾರಂಭ ಯಾವಾಗ ಎಂಬ ಕುತೂಹಲಕ್ಕೆ ತೆರೆ ಬಿದ್ದಿದೆ. ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುವ ಈ ಶೋ ಅಕ್ಟೋಬರ್ 15 ರಿಂದ ಆರಂಭವಾಗಲಿದೆ.

ಅಕ್ಟೋಬರ್ 15 ರಂದು ಬಿಗ್ ಶೋ ನಲ್ಲಿ ಸ್ಪರ್ಧಿಸುವ ಸ್ಪರ್ಧಿಗಳು ಯಾರು ಎಂಬುದು ತಿಳಿಯಲಿದ್ದು, ಅಕ್ಟೋಬರ್ 16 ರಿಂದ ಪ್ರತಿದಿನ ರಾತ್ರಿ 8 ಗಂಟೆಗೆ ಶೋ ಪ್ರಸಾರವಾಗಲಿದೆ. ಈಗಾಗಲೇ ಕಳೆದ ನಾಲ್ಕು ಸೀಸನ್ ಗಳಿಗಿಂತ ಈ ಸೀಸನ್ ಪ್ರೇಕ್ಷಕರಲ್ಲಿ ಕುತೂಹಲ ಹೆಚ್ಚಿಸಿದ್ದು, ಕಳೆದ ಸರಣಿಗಳಲ್ಲಿ ಸೆಲೆಬ್ರೆಟಿಗಳು ಮಾತ್ರ ಬಿಗ್ ಬಾಸ್ ಮನೆಯಲ್ಲಿ ಕಾಣಿಸಿಕೊಂಡಿದ್ದರೆ ಈ ಬಾರಿ ಅವರ ಸೆಲೆಬ್ರೆಟಿಗಳ ಜತೆ ಶ್ರೀಸಾಮಾನ್ಯರು ಕಾಣಿಸಿಕೊಳ್ಳಲಿದ್ದಾರೆ. ಹೀಗಾಗಿ ಸಾಮಾನ್ಯವಾಗಿ ಪ್ರೇಕ್ಷಕರಲ್ಲಿ ಕುತೂಹಲ ಹೆಚ್ಚಿದೆ. ಇನ್ನೂ ಬಿಗ್ ಬಾಸ್ ಶೋನ ಬಿಗ್ ಬಾಸ್ ಆಗಿ ಕಾಣಿಸಿಕೊಂಡು ಪ್ರೇಕ್ಷಕರ ಮೆಚ್ಚುಗೆ ಗಳಿಸಿರುವ ಕಿಚ್ಚ ಸುದೀಪ್ ಈ ಬಾರಿಯೂ ಮತ್ತೆ ಬಿಗ್ ಬಾಸ್ ಆಗಿ ಎಲ್ಲರ ಮನೆಯಂಗಳಕ್ಕೆ ಬರಲು ಸಜ್ಜಾಗಿದ್ದಾರೆ.

ಇನ್ನೂ ಬಿಗ್ ಬಾಸ್ ಸೀಸನ್ 5ರ ಪ್ರೋಮೊ ರಿಲೀಸ್ ಆಗಿದ್ದು, ಇದರಲ್ಲಿ ಸುದೀಪ್ ಎಂದಿನಂತೆ ಸ್ಟೈಲಿಷ್ ಹಾಗೂ ಡಿಫ್ರೆಂಟ್ ಆಗಿ ಕಾಣಿಸಿಕೊಂಡಿದ್ದಾರೆ. ಅಲ್ಲದೆ, ಈ ಬಾರಿ ಬಿಗ್ ಬಾಸ್ ನಲ್ಲಿ ವಾರ ವಾರ ಹಬ್ಬದೂಟ ಎಂಬ ಡೈಲಾಗ್ ಹೇಳುವ ಮೂಲಕ ಈ ಬಾರಿಯ ಶೋ ನಲ್ಲಿ ಹೊಸತೇನೋ ಇರಲಿದೆ ಎಂಬುವುದನ್ನು ಸ್ಪಷ್ಟಪಡಿಸಿದ್ದಾರೆ. ಸದ್ಯಕ್ಕೆ ಬಿಗ್ ಬಾಸ್ ಸೀಸನ್ 5ರ ಪ್ರೋಮೋ ಸೋಷಿಯಲ್ ಮೀಡಿಯಾದಲ್ಲಿ ಗಮನ ಸೆಳೆಯುತ್ತಿದೆ.

Leave a Reply

comments

Related Articles

error: