ಮೈಸೂರು

ಗೊಬ್ಬರದ ಚೀಲ ಹೊತ್ತು ಓಡಿದ ಪುರುಷರು, ಬಿಂದಿಗೆ ಹೊತ್ತು ಓಡಿದ ಮಹಿಳೆಯರು…

ಮೈಸೂರು, ಸೆ.೨೩: ಪುರುಷರ ಹೆಗಲ ಮೇಲೆ ೫೦ ಕೆಜಿ ತೂಕದ ಗೊಬ್ಬರದ ಚೀಲ, ಮಹಿಳೆಯರ ತಲೆ ಮೇಲೆ ನೀರು ತುಂಬಿದ ಬಿಂದಿಗೆ, ಕಾಲಿಗೆ ಗೋಣಿಚೀಲ ಕಟ್ಟಿಕೊಂಡು ಕುಪ್ಪಳಿಸುತ್ತಿದ್ದರೆ, ಇತ್ತ ಚಮಚದಲ್ಲಿ ನಿಂಬೆ ಹಣ್ಣಿಟ್ಟುಕೊಂಡು ಬೀಳದಂತೆ ಬ್ಯಾಲೆನ್ಸ್ ಮಾಡುತ್ತಿದ್ದರು.
ಇಷ್ಟೆಲ್ಲಾ ದೃಶ್ಯಗಳಿಗೆ ಸಾಕ್ಷಿಯಾಗಿದ್ದು ನಗರದ ಜೆಕೆ ಮೈದಾನ. ದಸರಾ ಮಹೋತ್ಸವದ ಅಂಗವಾಗಿ ಆಯೋಜಿಸಿರುವ ರೈತ ದಸರಾದಲ್ಲಿ ಪುರುಷರು ಹಾಗೂ ಮಹಿಳೆಯರಿಗೆ ಆಯೋಜಿಸಿದ್ದ ಕ್ರೀಡಾ ಸ್ಪರ್ಧೆಯಲ್ಲಿ ಕಂಡುಬಂದ ದೃಶ್ಯಗಳಿವು. ಮೊದಲಿಗೆ ಪುರುಷರಿಗೆ ೫೦ ಕೆಜಿ ತೂಕದ ಗೊಬ್ಬರದ ಚೀಲ ಹೊತ್ತು ಓಡುವ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಭಾರ ಹೊತ್ತು ಓಡಲು ಪುರುಷರು ಅಣಿಯಾದರು. ನಾ ಮುಂದು ತಾ ಮುಂದು ಎಂದು ಓಡಿದರು. ಕೆಲವರು ಗುರಿ ಮುಟ್ಟಿದರೆ ಇನ್ಕೆಲವರು ಅಧಕ್ಕೆ ನಿಂತರು. ಈ ಸ್ಪರ್ಧೆಯಲ್ಲಿ ಟಿ.ನರಸೀಪುರ ತಾಲೂಕು ಡಣಯಾನಪುರದ ಮನೋಜ್ ಕುಮಾರ್ ಮೊದಲ ಸ್ಥಾನಪಡೆದರು. ಕಳೆದ ೫ ವರ್ಷಗಳಿಂದಲೂ ಮೊದಲನೇ ಬಹುಮಾನವನ್ನು ಮನೋಜ್ ಕುಮಾರ್ ತಮ್ಮದಾಗಿಸಿಕೊಳ್ಳುತ್ತಿದ್ದಾರೆ.
ಬಳಿಕ ಕಾಲಿಗೆ ಗೋಣಿಚೀಲ ಕಟ್ಟಿಕೊಂಡು ಓಡುವ ಸ್ಪರ್ಧೆ ಆಯೋಜಿಸಲಾಯಿತು. ಇದರಲ್ಲೂ ಸಹ ಪುರುಷರು ಉತ್ಸಾಹದಿಂದ ಪಾಲ್ಗೊಂಡರು. ಕಾಲಿಗೆ ಗೋಣಿಚೀಲ ಕಟ್ಟಿಕೊಂಡು ಕುಪ್ಪಳಿಸುವುದನ್ನು ನೋಡಿ ವೀಕ್ಷಕರು ಖುಷಿ ಪಟ್ಟರೆ ಇತ್ತ ಸ್ಪರ್ಧಾಳು ಗುರಿತಲುಪಲು ಅವಣಿಸುತ್ತಿದ್ದ. ಪುರುಷರಿಗಿಂತ ಮಹಿಳೆಯರೇನು ಕಡಿಮೆ ಇಲ್ಲವೆಂದೂ ಮಹಿಳೆಯರು ತಲೆಯ ಮೇಲೆ ನೀರು ತುಂಬಿದ ಬಿಂದಿಗೆ ಒತ್ತು ಓಡಿದರು. ನಂತರ ಲೆಮನ್ ಅಂಡ್ ಸ್ಪೋನ್ ಸ್ಪರ್ಧೆಯಲ್ಲಿ ಭಾಗವಹಿಸಿ ಖುಷಿಪಟ್ಟರು. (ವರದಿ ಬಿ.ಎಂ)

Leave a Reply

comments

Related Articles

error: