
ದೇಶಪ್ರಮುಖ ಸುದ್ದಿ
ಚಿದಂಬರಮ್ ಕುಟುಂಬಕ್ಕೆ ತಿಹಾರ್ ಜೈಲೇ ಕಾಯಂ : ಸುಬ್ರಹ್ಮಣಿಯನ್ ಸ್ವಾಮಿ
ನವದೆಹಲಿ, ಸೆ.23 : ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ಕುಟುಂಬದ ಬರುವಿಕೆಗಾಗಿ ತಿಹಾರ್ ಜೈಲು ಕಾಯುತ್ತಿದೆ ಎಂದು ಹೇಳುವ ಮೂಲಕ ಬಿಜೆಪಿ ನಾಯಕ ಸುಬ್ರಹ್ಮಣಿಯರ್ ಸ್ವಾಮಿ ಅವರು ಇಂದು ಹೇಳಿದ್ದಾರೆ.
ನಿನ್ನೆಯಷ್ಟೇ ಕಾರ್ತಿ ಚಿದಂಬರಮ್ ವಿರುದ್ಧ ಕೇಂದ್ರೀಯ ತನಿಖಾ ಸಂಸ್ಥೆ – ಸಿಬಿಐ ಸುಪ್ರೀಮ್ ಕೋರ್ಟ್ಗೆ ಮಾಹಿತಿ ಸಲ್ಲಿಸಿದ್ದು “ಕಾರ್ತಿ ಚಿದಂಬರಮ್ ಅವರನ್ನು ವಿದೇಶ ಪ್ರಯಾಣ ಮಾಡದಂತೆ ತಡೆದಿರುವುದಾಗಿ ಹೇಳಿದೆ. ಮಾತ್ರವಲ್ಲ ವಿದೇಶದ ಬ್ಯಾಂಕ್ಗಳಲ್ಲಿರುವ ತಮ್ಮ ಖಾತೆಗಳನ್ನು ಮುಚ್ಚಲು ಅವರು ಪ್ರಯತ್ನಿಸುತ್ತಿದ್ದಾರೆ ಎನ್ನುವ ಶಂಕೆಯಿದೆ” ಎಂದೂ ತಿಳಿಸಿದೆ.
ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಸ್ವಾಮಿ “ಚಿದಂಬರಮ್ ಪುತ್ರ ಕಾರ್ತಿ ಒಬ್ಬ ಮೋಸಗಾರ. ಅವನಿಗೆ ಸರಿಯಾದ ವಿದ್ಯಾಭ್ಯಾಸವಿಲ್ಲ. ಯಾವುದೇ ಹುದ್ದೇಯೂ ಇಲ್ಲ. ಹೀಗಿರುವಾಗ ಇಷ್ಟೋಂದು ಸಂಪತ್ತನ್ನು ಇವರು ಹೇಗೆ ಸಂಪಾದಿಸಿದರು. ಅಪ್ಪ-ಮಗ ಇಬ್ಬರೂ ಕಳ್ಳರೇ” ಎಂದು ಜರಿದಿದ್ದಾರೆ.
“ಚಿದಂಬರಂ ಪತ್ನಿ ನಳಿನಿ ಅವರೂ ಇದೇ ರೀತಿ ಆಸ್ತಿ ಸಂಪಾದಿಸಿದ್ದಾರೆ. ಇಂತಹ ಕಳ್ಳರ ಕುಟುಂಬದ ಬರುವಿಕೆಗಾಗಿ ತಿಹಾರ್ ಜೈಲು ಕಾಯುತ್ತಿದೆ. ಇಡೀ ಕುಟುಂಬ ಜೈಲು ಪಾಲಾಗಲಿದೆ” ಎಂದು ಸ್ವಾಮಿ ಕುಹಕವಾಡಿದ್ದಾರೆ.
ಪಿ.ಚಿದಂಬರಮ್ ಅವರು ಯುಪಿಎ ಸರ್ಕಾರದಲ್ಲಿ ಹಣಕಾಸು ಸಚಿವರಾಗಿದ್ದಾಗ ಐಎನ್ಎಕ್ಸ್ ಮೀಡಿಯಾಗೆ ಎಫ್ಐಪಿಬಿ ನಿರಪೇಕ್ಷಾ ಪತ್ರ ಕೊಡಿಸಲು ಕಾನೂನು ಬಾಹಿರವಾಗಿ ಸೇವಾಶುಲ್ಕ ಪಡೆಯುವ ಮೂಲಕ ಭ್ರಷ್ಟಾಚಾರ ಮಾಡಿದ ಆರೋಪ ಕಾರ್ತಿ ಅವರ ಮೇಲಿದೆ.
ಇದೇ ಪ್ರಕರಣದಲ್ಲಿ ಕಳೆದ ಮೇ 15 ರಂದು ಎಫ್ಐಆರ್ ದಾಖಲಾಗಿದ್ದು, ಕಾರ್ತಿ ಅವರ ವಿರುದ್ಧ ಸಿಬಿಐ ಲುಕ್ಔಟ್ ನೋಟಿಸ್ ಕೂಡ ಜಾರಿ ಮಾಡಿತ್ತು. ಇದೀಗ ಕಾರ್ತಿ ಚಿದಂಬರಂ ಅವರನ್ನು ವಿದೇಶ ಪ್ರಯಾಣ ಮಾಡದಂತೆ ನಿರ್ಬಂಧಿಸಲಾಗಿದೆ.
(ಎನ್.ಬಿ)