ದೇಶಪ್ರಮುಖ ಸುದ್ದಿ

ಗಿನ್ನಿಸ್ ದಾಖಲೆಗಾಗಿ ಮುಸ್ಲಿಂ ಕಲಾವಿದನಿಂದ 101 ಅಡಿ ಎತ್ತರದ ದುರ್ಗಾ ಪ್ರತಿಮೆ

ಗುವಾಹಟಿ (ಅಸೋಮ್) ಸೆ.23 : ಭಾರತವು ಕೋಮು ಸಂಘರ್ಷಮಯ ನಾಡು ಎನ್ನುವವರಿಗೆ ಉತ್ತರವೆಂಬಂತೆ ಗುವಾಹಟಿಯಲ್ಲಿ ಮುಸ್ಲಿಂ ಕಲಾವಿದರೊಬ್ಬರು ಗಿನ್ನಿಸ್ ದಾಖಲೆಗಾಗಿ 101 ಅಡಿ ಎತ್ತರದ ದುರ್ಗಾ ಪ್ರತಿಮೆ ನಿರ್ಮಾಣದಲ್ಲಿ ನಿರತರಾಗಿದ್ದಾರೆ.

ಬಂಬುಗಳನ್ನು ಬಳಸಿ ವಿಶಿಷ್ಟವಾಗಿ ಈ ಪ್ರತಿಮೆಯನ್ನು ನಿರ್ಮಾಣ ಮಾಡುತ್ತಿದ್ದು “ಬಂಬು ಬಳಸಿ ನಿರ್ಮಿಸಿದ ಅತಿ ಎತ್ತರದ ಪ್ರತಿಮೆ” ಎಂಬ ದಾಖಲೆ ಬರೆಯಲು ಈ ಪ್ರತಿಮೆ ನಿರ್ಮಾಣ ಮಾಡುತ್ತಿದ್ದು, ಬಿಷ್ಣುಪುರ ದುರ್ಗಾ ಪೂಜಾ ಕಮಿಟಿಯು ಈ ಪ್ರತಿಮೆಯನ್ನು ಗಿನ್ನೆಸ್ ದಾಖಲೆಗೆ ಸೇರಿಸಲು ನೋಂದಣಿ ಮಾಡಿಸಿದೆ.

ದುರ್ಗಾ ಪ್ರತಿಮೆ ನಿರ್ಮಾಣ ಮಾಡುತ್ತಿರುವ ಕಲಾವಿದ ನೂರುದ್ದೀನ್ ಅವರು ಈ ಕುರಿತು ಸುದ್ದಿಸಂಸ್ಥೆಗಳೊಂದಿಗೆ ಮಾತನಾಡಿದ್ದು, “ನೀವು ಮುಸ್ಲಿ ಆಗಿದ್ದೂ ಏಕೆ ದುರ್ಗಾ ಪ್ರತಿಮೆಯಲ್ಲಿ ತೊಡಗಿಸಿಕೊಂಡಿದ್ದೀರಿ ಎಂದು ಕೆಲವು ಮಂದಿ ನನ್ನನ್ನು ಪ್ರಶ್ನೆ ಮಾಡುತ್ತಿದ್ದಾರೆ. ನಾನು ಅವರಿಗೆ ಹೇಳಬಯಸುವುದೇನೆಂದರೆ, ನಾನು 197ರಿಂದಲೂ ದುರ್ಗಾ ಪ್ರತಿಮೆ ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದೇನೆ. ಮತ್ತು ಓರ್ವ ಕಲಾವಿದನಿಗೆ ಯಾವುದೇ ಧರ್ಮ ಜಾತಿಯ ಅಡ್ಡಿಯಾಗಬಾರದು. ಕಲಾವಿದ ಕಲಾಸೇವೆಯ ಮೂಲಕ ಮಾನವಕುಲದ ಸೇವೆ ಮಾಡಬೇಕು” ಎಂದು ಹೇಳಿದ್ದಾರೆ.

ಐದು ಸಾವಿರ ಬಂಬೂ ಗಳಗಳನ್ನು ಈ ದುರ್ಗಾ ಮಾತೆಯ ಪ್ರತಿಮೆ ನಿರ್ಮಾಣ ಮಾಡುತ್ತಿರುವುದಾಗಿ ಇದೇ ವೇಳೆ ಅವರು ತಿಳಿಸಿದ್ದಾರೆ.

ಬಿಷ್ಣುಪುರ ದುರ್ಗಾ ಪೂಜಾ ಕಮಿಟಿಯು ಸೆ.20 ರೊಳಗೆ ಈ ನಿರ್ಮಾಣ ಕಾರ್ಯ ಮುಗಿಯಬೇಕು ಎಂದು ಕಾಲಮಿತಿ ಹಾಕಿಕೊಂಡಿತ್ತು. ಈ ಕುರಿತು ಮಾತನಾಡಿರುವ ಪ್ರತಿಮೆ ನಿರ್ಮಾಣ ಕಾರ್ಯಾದ ಮೇಲ್ವಿಚಾರಕ ದೀಪ್ ಅಹಮದ್ ಅವರು, ಎರಡು ತಿಂಗಳ ಹಿಂದೆ ಕೆಲಸ ಪ್ರಾರಂಭವಾಗಿದೆ. ಆಗ ಪ್ರತಿಮೆಯ ಅಂದಾಜು ಎತ್ತರ 110 ಅಡಿ ಎಂದು ನಿಗದಿಪಡಿಸಲಾಗಿತ್ತು. ಮತ್ತು ಸೆ.20ರೊಳಗೆ ಈ ಕಾರ್ಯ ಮುಗಿಯಬೇಕಿತ್ತು. ಆದರೆ ಸೆ.17ರಂದು ಪ್ರತಿಮೆಯು ಬಿರುಗಾಳಿಗೆ ಸಿಲುಕಿ ಉರುಳಿ ಬಿತ್ತು. ಅದೃಷ್ಟವಶಾತ್ ಯಾರಿಗೂ ಪ್ರಾಣಾಪಾಯವಾಗಲಿಲ್ಲ. ಸಾಮಾಜಿಕ ಮಾಧ್ಯಮಗಳು ನಮಗೆ ಉತ್ತಮ ಬೆಂಬಲ ನೀಡುತ್ತಿವೆ, ನಾನವರಿಗೆ ಕೃತಜ್ಞನಾಗಿದ್ದೇನೆ. ಪ್ರತಿಮೆ ನಿರ್ಮಾಣ ಕಾರ್ಯವನ್ನು ಸೆ.25ರೊಳಗೆ ಪೂರ್ಣಗೊಳಿಸುವ ಭರವಸೆ ಇದೆ” ಎಂದು ಹೇಳಿದ್ದಾರೆ.

(ಎನ್.ಬಿ)

Leave a Reply

comments

Related Articles

error: