ಮೈಸೂರು

ರಿಯಾಯಿತಿ ದರದಲ್ಲಿ ಹೆಲಿರೈಡ್‌ಗೆ ಅನುವು ಮಾಡಿಕೊಡುವಂತೆ ರೈತರ ಮನವಿ

ಮೈಸೂರು, ಸೆ.೨೩: ದಸರಾ ಮಹೋತ್ಸವ ಅಂಗವಾಗಿ ಆಯೋಜಿಸಿರುವ ಹೆಲಿರೈಡ್‌ರಲ್ಲಿ ರಿಯಾಯಿತಿ ದರದಲ್ಲಿ ದಸರಾ ವೀಕ್ಷಣೆ ಮಾಡಲು ಅನುವು ಮಾಡಿಕೊಡಬೇಕೆಂದು ರೈತರು ಆಗ್ರಹಿಸಿದ್ದಾರೆ.
ಈ ಸಂಬಂಧ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿರುವ ಅವರು, ಜಲ್ಲಾಡಳಿತ ದಸರಾ ವೀಕ್ಷಣೆಗೆ ಹೆಲಿಕಾಪ್ಟರ್ ವ್ಯವಸ್ಥೆ ಮಾಡಿರುವುದು ಸಂತಸದ ವಿಷಯ. ಹೆಲಿರೈಡ್‌ಗೆ ತಲಾ ೨೩೦೦ ರೂ ನಿಗದಿಮಾಡಲಾಗಿದೆ. ಚಾಮರಾಜನಗರ, ಕೊಳ್ಳೇಗಾಲ, ಗುಂಡ್ಲುಪೇಟೆ, ಮಂಡ್ಯ, ಹಾಸನ, ಹುಣಸೂರು, ಕೊಡಗು, ಟಿ.ನರಸೀಪುರ ಸೇರಿದಂತೆ ನಾನಾ ಕಡೆಗಳಿಂದ ರೈತರು ತಮ್ಮ ಮಕ್ಕಳು ಮಡದಿಯರೊಂದಿಗೆ ದಸರಾ ವೀಕ್ಷಣೆಗೆ ಬರುತ್ತಾರೆ. ಉಳ್ಳವರು ಆಗಸದಲ್ಲಿ ಸಿರಿವಂತಿಕ ಪ್ರದರ್ಶನ ಮಾಡಿದರೆ ರೈತರ ಮಕ್ಕಳು ಏನು ಮಾಡಬೇಕು. ಹಾಗಾಗಿ ರೈತರಿಗೂ ರಿಯಾಯಿತಿ ದರದಲ್ಲಿ ಹೆಲಿಕಾಪ್ಟರ್ ರೈಡ್ ಮಾಡಲು ಅನುವು ಮಾಡಿಕೊಡಬೇಕು ಎಂದು ಒತಾಯಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಶಿವಕುಮಾರ್, ವರದರಾಜು, ಕಾಂತರಾಜು, ಶಿವಣ್ಣ, ಶಿವಜಂಜೇಗೌಡ, ರಮೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. (ವರದಿ ಬಿ.ಎಂ)

Leave a Reply

comments

Related Articles

error: