ದೇಶಪ್ರಮುಖ ಸುದ್ದಿ

“ನ್ಯೂಟನ್” ಆಸ್ಕರ್ ಪಯಣ ಈಗಷ್ಟೇ ಆರಂಭವಾಗಿದೆ : ಅಂಜಲಿ ಪಾಟಿಲ್

ಮುಂಬೈ, ಸೆ.23 : ನ್ಯೂಟನ್ ಚಿತ್ರವು 2018ನೇ ಸಾಲಿ ಆಸ್ಕರ್ ಪ್ರಶಸ್ತಿಗೆ ಭಾರತದಿಂದ ಅಧಿಕೃತ ಸ್ಪರ್ಧಿಯಾಗಿ ಆಯ್ಕೆಯಾಗಿರುವುದು ಖುಷಿಯ ವಿಚಾರ. ಆದರೆ ಆಸ್ಕರ್ ಹಾದಿಯ ಜರ್ನಿ ಈಗಷ್ಟೇ ಆರಂಭವಾಗಿದೆ ಎಂದು ಚಿತ್ರದಲ್ಲಿ ಮಾಲ್ಕೊ ಪಾತ್ರದಲ್ಲಿ ಅಭಿನಯಿಸಿರುವ ನಟಿ ಅಂಜಲಿ ಪಾಟೀಲ್ ಹೇಳಿದ್ದಾರೆ.

ಆಸ್ಕರ್ ಪ್ರಶಸ್ತಿ ಪಡೆಯುವ ವಿಶ್ವಾಸವಿದೆಯೇ ಎಂಬ ಸುದ್ದಿಗಾರ ಪ್ರಶ್ನೆಗೆ ಉತ್ತರಿಸುತ್ತಿದ್ದ ಅವರು, “ಪ್ರಾಮಾಣಿಕವಾಗಿ ಹೇಳುವುದಾದರೆ “ನ್ಯೂಟನ್‍” ಚಿತ್ರವು ಈ ವರ್ಷದ ಅತ್ಯುತ್ತಮ ಚಿತ್ರವಾಗಿದೆ. ಭಾರತದ ಸಿನಿಮಾವೊಂದು ಆಸ್ಕರ್ ಪಡೆಯುವ ನಿಟ್ಟಿನಲ್ಲಿ ಹೇಳುವುದಾದರೆ “ನ್ಯೂಟನ್‍” ಅತ್ಯುತ್ತಮ ಆಯ್ಕೆ ಎಂದೇ ಹೇಳಬೇಕು. ಆದರೆ ಆಸ್ಕರ್ ಪಡೆಯುವ ನಿಟ್ಟಿನಲ್ಲಿ ಈಗಷ್ಟೇ ಪಯಣ ಆರಂಭವಾಗಿದೆ. ಎಲ್ಲವೂ ಈ ಪಯಣದ ಅಂತ್ಯದಲ್ಲಿ ತಿಳಿಯಲಿದೆ” ಎಂದು ಪ್ರತಿಕ್ರಿಯಿಸಿದ್ದಾರೆ.

ಚಿತ್ರದ ಕುರಿತು ನಿರ್ದೇಶಕ ಅಮಿತ್ ಮುಸುರ್ಕರ್ ಅವರ ನಿಲುವಿನ ಬಗ್ಗೆ ಕೇಳಿದಾಗ, “ನ್ಯೂಟನ್‍” ಚಿತ್ರವು ಹಲವು ವಿಯಷಗಳನ್ನು ಹೇಳುತ್ತದೆ. ಅದು ನಕ್ಸಲ್ ಪ್ರಭಾವಿತ ಪ್ರದೇಶವಾಗಿರಬಹುರು, ಮುಂಬೈ, ದೆಹಲಿ ಯಾವುದೇ ಪ್ರದೇಶವಾದರೂ ನಮ್ಮ ನಡವಳಿಕೆಯಲ್ಲಿ ಶಿಕ್ಷಣ ಬಹುಮುಖ್ಯ ಪಾತ್ರ ವಹಿಸುತ್ತದೆ. ಅಂತೆಯೇ ಸರ್ಕಾರಿ ಅಧಿಕಾರಿಗಳು, ವ್ಯವಸ್ಥೆ ಕೂಡ ಗಾಢವಾದ ಪರಿಣಾಮ ಬೀರಿ ನಮ್ಮನ್ನು ನಿಯಂತ್ರಿಸುತ್ತಿರುತ್ತವೆ. ಚಿತ್ರದಲ್ಲಿ ಈ ಎಲ್ಲ ಅಂಶಗಳನ್ನೂ ಸೂಕ್ಷ್ಮವಾಗಿ ಮತ್ತು ಪರಿಣಾಮಕಾರಿಯಾಗಿ ಬಿಂಬಿಸಲಾಗಿದೆ. ಹೀಗಾಗಿಯೇ ಇದನ್ನು ಕಪ್ಪು-ಕಾಮಿಡಿ ಚಿತ್ರ” ಎನ್ನಬಹುದು ಎಂದು ಅಂಜಲಿ ವಿವರಿಸಿದ್ದಾರೆ.

ನ್ಯೂಟನ್ ಚಿತ್ರವು ವಿದೇಶಿ ಭಾಷಾ ಚಿತ್ರಗಳ ವಿಭಾಗದಲ್ಲಿ 2018ನೇ ಸಾಲಿನ 90ನೇ ಆಸ್ಕರ್ ಅಕಾಡೆಮಿ ಪ್ರಶಸ್ತಿಗಾಗಿ ಭಾರತದ ಅಧಿಕೃತ ಚಿತ್ರವಾಗಿ ಆಯ್ಕೆಯಾಗಿದೆ.

ಈ ಬಗ್ಗೆ ಚಿತ್ರದಲ್ಲಿ ಪ್ರಧಾನ ಪಾತ್ರ ವಹಿಸಿರುವ ನಟ ರಾಜ್‍ ಕುಮಾರ್ ರಾವ್ ಅವರೂ ಕೂಡ ಆಸ್ಕರ್ ಪ್ರಶಸ್ತಿ ಸ್ಪರ್ಧೆಗೆ ಅಧಿಕೃತವಾಗಿ ಆಯ್ಕೆಯಾದ ಬಗ್ಗೆ ಖುಷಿ ವ್ಯಕ್ತಪಡಿಸಿ ಟ್ವಿಟ್ ಮಾಡಿದ್ದಾರೆ.

“Very happy to share this news that #NEWTON is India’s official entry to the #OSCARS this year. Congratulations team.”

ಅಧಿಕೃತ ಸ್ಪರ್ಧೆಯ ವಿಷಯ ತಿಳಿಯುತ್ತಿದ್ದಂತೆ ಸಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿರುವ ಬಾಲಿವುಡ್‍ ಪ್ರಮುಖರು ಚಿತ್ರತಂಡಕ್ಕೆ ಅಭಿನಂದನೆಗಳ ಮಳೆಸುರಿದ್ದಾರೆ. ಕೆಲವು ಟ್ವೀಟ್‍ಗಳನ್ನು ಇಲ್ಲಿ ಗಮನಿಸಬಹುದು.

Anil Kapoor: Congratulations Rajkummar Rao and the whole team of ‘Newton’! This is such great news! All the best!

Akshay Kumar: #Newton as India’s official entry to the Oscars! Congratulations @aanandlrai @RajkummarRao & team,can imagine the joy you’ll must be feeling

Bhumi Pednekar: Well deserved and congratulations team ‘Newton’.

Ayushmann Khurrana: ‘Newton’ is India’s official entry to the Oscars. Very deserving! Hail Aanand L Rai sir, fab Rajkummar Rao, genius Amit Masurkar.

(ಎನ್.ಬಿ)

Leave a Reply

comments

Related Articles

error: