ಮೈಸೂರು

ಹಿರಿಯ ಇಂಜಿನಿಯರ್ ಗಳಿಗೆ ಸರ್. ಎಂ. ವಿಶ್ವೇಶ್ವರಯ್ಯ ಸೇವಾರತ್ನ ಪ್ರಶಸ್ತಿ ಪ್ರದಾನ

ಮೈಸೂರು,ಸೆ.23 : ಸಮಗ್ರ ಕರ್ನಾಟಕ ರಕ್ಷಣಾ ವೇದಿಕೆಯೂ ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಸಾಧನೆಗೈದ ಹಿರಿಯ ಇಂಜಿನಿಯರಿಂಗ್ ಗಳಿಗೆ ಸರ್ ಎಂ.ವಿಶ್ವೇಶ್ವರಯ್ಯ ಸೇವಾರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಹಿರಿಯ ಇಂಜಿನಿಯರ್ ಗಳಾದ ಮೇಜರ್ ಜನರಲ್ ಎಸ್.ಜಿ.ಒಂಬತ್ಕೆರೆ, ಸಿ.ವಿ.ಗೋಪಿನಾಥ್, ಎ.ಎಸ್.ಸತೀಶ್ ಇವರುಗಳಿಗೆ ಇಂದು ಪತ್ರಕರ್ತರ ಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಮೇಜರ್ ಎಸ್.ಜಿ.ಒಂಬತ್ಕೆರೆ ಯವರು 1982ರಲ್ಲಿ ಲಡಾಕ್ ನಲ್ಲಿ 18,300 ಅಡಿ ಎತ್ತದಲ್ಲಿ ಗ್ಲೆಶಿಯರ್ ಐಸ್ ನಲ್ಲಿ ನಿರ್ಮಿಸಲಾದ ವಿಶ್ವದ ಅತಿ ಎತ್ತರ ಮೋಟಾರ್ ವಾಹನ ಸೇತುವೆಯ ವಿನ್ಯಾಸ ನಿರ್ಮಾಣಕ್ಕೆ ಕಾರಣಕರ್ತರಾಗಿದ್ದು ಇವರ ಅತ್ಯುದ್ಬುತ  ಸಾಧನೆಯು ಗಿನ್ನಿಸ್ ಬುಕ್ ಆಫ್ ರೆಕಾರ್ಡ್ ನಲ್ಲಿ ಸೇರ್ಪಡೆಯಾಗಿದೆ.

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭದ ಉಪಾಧ್ಯಕ್ಷ ಬಿ.ಆರ್.ನಟರಾಜ್, ವೇದಿಕೆ ಅಧ್ಯಕ್ಷ ಅರವಿಂದ
ಶರ್ಮ, ಕನ್ನಡ ಹೋರಾಟಗಾರ ಬಿ.ಎ.ಶಿವಶಂಕರ್ ಮೊದಲಾದವರು ಈ ಸಂದರ್ಭಕ್ಕೆ ಸಾಕ್ಷಿಯಾದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: