ಪ್ರಮುಖ ಸುದ್ದಿಮೈಸೂರು

ಕೊಲೆಯತ್ನ ಆರೋಪ ಸಾಬೀತು: ಯುವಕನಿಗೆ 2 ವರ್ಷ ಜೈಲು

2011ರಲ್ಲಿ ಯುವತಿಯೊಬ್ಬಳ ಹತ್ಯೆಗೆ ಯತ್ನಿಸಿದ್ದ ವಿವಿ ಮೊಹಲ್ಲಾ ನಿವಾಸಿ ರಾಕೇಶ್(29) ಆರೋಪಿ ಎಂದು ಮೈಸೂರು ಜಿಲ್ಲಾ ನ್ಯಾಯಾಲಯ ಘೋಷಿಸಿದೆ. ಆತನಿಗೆ 2 ವರ್ಷ ಜೈಲು ಮತ್ತು 2.5 ಲಕ್ಷ ರು. ದಂಡ ಕೂಡ ವಿಧಿಸಲಾಗಿದೆ. ಅದರಲ್ಲಿ 2 ಲಕ್ಷ ರು. ಅನ್ನು ಸಂತ್ರಸ್ತೆಗೆ ನೀಡುವಂತೆ ಕೋರ್ಟ್ ತೀರ್ಪು ನೀಡಿದೆ.

ಡಿಸೆಂಬರ್ 29ರಂದು ಜಯಲಕ್ಷ್ಮೀಪುರಂ ಪೊಲೀಸರು ಐಪಿಸಿ ಸೆಕ್ಷನ್ 326(ಮಾರಕ ಆಯುಧದಿಂದ ಗಾಯ) ಮತ್ತು 307(ಕೊಲೆ ಯತ್ನ) ಪ್ರಕಾರ ರಾಕೇಶ್ ಮೇಲೆ ಆಪಾದನೆಗಳನ್ನು ಹೊರಿಸಿತ್ತು.

ರಾಕೇಶ್ ಮಾಧುರಿಯನ್ನು ಪ್ರೀತಿಸುತ್ತಿದ್ದ. ಆದರೆ, ಆಕೆ ಆತನ ಪ್ರೀತಿಯನ್ನು ಧಿಕ್ಕರಿಸಿ ಸಾಫ್ಟ್‍ವೇರ್‍ ಇಂಜಿನಿಯರ್‍ ಒಬ್ಬರನ್ನು ವಿವಾಹವಾಗಿ ಬೇರೆ ರಾಜ್ಯದಲ್ಲಿ ವಾಸವಿದ್ದಳು. 2011ರ ಡಿಸೆಂಬರ್ 29ರಂದು ಮಹಾಜನಾಸ್ ಕಾಲೇಜಿನಲ್ಲಿ ಕಂಪನಿ ಸೆಕ್ರೆಟರಿ ಪರೀಕ್ಷೆ ಬರೆಯಲು ಮೈಸೂರಿಗೆ ಆಗಮಿಸಿದ್ದಳು. ಮಧ್ಯಾಹ್ನ 12 ಗಂಟೆ ಸುಮಾರಿಗೆ ಪರೀಕ್ಷೆ ಬರೆದು ಮನೆಗೆ ವಾಪಸಾಗುತ್ತಿದ್ದ ವೇಳೆ ರಾಕೇಶ್ ಮಾರಕಾಯುಧಗಳಿಂದ ಆಕೆಯ ಮೇಲೆ ದಾಳಿ ನಡೆಸಿದ್ದ.

 

Leave a Reply

comments

Related Articles

error: