
ಮೈಸೂರು
ಅಕಾಡೆಮಿ ಆಫ್ ಸೆಲ್ಫ್ ಡಿಫೆನ್ಸ್ ಸಂಸ್ಥೆ ಕ್ರೀಡಾಪಟುಗಳು ಏಷಿಯನ್ ಚಾಂಪಿಯನ್ ಶಿಫ್ ಸ್ಪರ್ಧೆಗೆ ಆಯ್ಕೆ
ಮೈಸೂರು,ಸೆ.23 : ನ್ಯಾಷನಲ್ ಕಿಕ್ ಬಾಕ್ಸಿಂಗ್ ಚಾಂಪಿಯನ್ ಶಿಪ್ ನಲ್ಲಿ ನಗರದ ಅಕಾಡೆಮಿ ಆಫ್ ಸೆಲ್ಫ್ ಡಿಫೆನ್ಸ್ ಸಂಸ್ಥೆಗೆ 6 ಸ್ವರ್ಣ ಸೇರಿದಂತೆ ಒಟ್ಟು 16 ಪದಕಗಳು ಲಭಿಸಿವೆ ಎಂದು ಸಂಸ್ಥೆಯ ಹರ್ಷ ಶಂಕರ್ ತಿಳಿಸಿದರು.
ಛತ್ತೀಸ್ ಗಡದ ರಾಯ್ ಪುರ್ ನಲ್ಲಿ ಕಳೆದ ಸೆ.6 ರಿಂದ 10ರವರೆಗೆ ನಡೆದ ನ್ಯಾಷನಲ್ ಬಾಕ್ಸಿಂಗ್ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ, ನಮ್ಮ ಸಂಸ್ಥೆಯ ಕ್ರೀಡಾಪಟುಗಳು ಸ್ಪರ್ಧೆಗಳಲ್ಲಿ ಉತ್ತಮ ಪ್ರದರ್ಶನ ನೀಡುವುದರೊಂದಿಗೆ 6 ಸ್ವರ್ಣ ಸೇರಿದಂತೆ 16 ಪದಕಗಳನ್ನು ಗಳಿಸುವ ಮೂಲಕ ಏಷಿಯನ್ ಚಾಂಪಿಯನ್ ಶಿಫ್ ಗೆ ಆಯ್ಕೆಯಾಗಿದ್ದಾರೆ, ರಾಜ್ಯದಿಂದ 30 ಕ್ರೀಡಾಪಟುಗಳು ಭಾಗಿಯಾಗಿದ್ದರು ಎಂದು ಶನಿವಾರ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.
ಶ್ರೀನಿಧಿ, ಆರ್. ರಜತ್ ಸಿಂಗ್, ರಕ್ಷಿತ್ ಕುಮಾರ್ ಮೊದಲಾದವರು ಸ್ವರ್ಣ ಪದಕ ವಿಜೇತರಾಗಿದ್ದಾರೆ, ಅದರಂತೆ ಎಂ.ಕೆ. ಸಂಜಯ್ ಕುಮಾರ್, ಅಭಿಷೇಕ್, ಕೌಸ್ತುಭ್, ಪ್ರೀಶಾ ಸುಬ್ರಹ್ಮಣ್ಯ, ವೈ.ಎನ್.ಸಮರ್ಥ, ಸಂಯತಾ ಮೊದಲಾದವರು ಬೆಳ್ಳಿ ಹಾಗೂ ಕಂಚಿನ ಪದಕ ವಿಜೇತರಾಗಿ ಸಂಸ್ಥೆಗೆ ಕೀರ್ತಿ ತಂದಿದ್ದಾರೆಂದು ಹರ್ಷಿಸಿದರು.
ಕೇರಳ, ತಮಿಳುನಾಡು, ಆಂದ್ರ ಪ್ರದೇಶ, ಉತ್ತರ ಖಂಡ್, ಮೇಘಾಲಯ, ಜಮ್ಮು ಮತ್ತು ಕಾಶ್ಮೀರ ಸೇರಿದಂತೆ 25 ರಾಜ್ಯಗಳ 2 ಸಾವಿರಕ್ಕೂ ಅಧಿಕ ಕ್ರೀಡಾಪಟುಗಳು ಭಾಗಿಯಾಗಿದ್ದರು ಎಂದು ತಿಳಿಸಿದರು.
ಸಂಸ್ಥೆಯ ಪೂಜಾ ಹರ್ಷ, ಶ್ರೀನಿಧಿ, ಸಂತೋಷ್, ಪದಕ ವಿಜೇತ ಕ್ರೀಡಾಪಟುಗಳು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು. (ವರದಿ : ಕೆ.ಎಂ.ಆರ್)