ಕರ್ನಾಟಕಮೈಸೂರು

ಕೊನೆಗೂ ನಿಗಮ ಮಂಡಳಿಗಳಿಗೆ ನೇಮಕಾತಿ

ಬೆಂಗಳೂರು: ನಿಗಮ, ಮಂಡಳಿಗಳಿಗೆ ಅಧ್ಯಕ್ಷರನ್ನು ನೇಮಕ ಮಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆದೇಶ ಹೊರಡಿಸಿದ್ದಾರೆ. ಸಚಿವ ಸ್ಥಾನ ಕೈತಪ್ಪಿದ್ದ ಶಾಸಕರಿಗೆ ನಿಗಮ, ಮಂಡಳಿ ಅಧ್ಯಕ್ಷ ಸ್ಥಾನಮಾನ ನೀಡಲಾಗಿದೆ. ನಿಗಮ, ಮಂಡಳಿ ಅಧ್ಯಕ್ಷರ ನೇಮಕಕ್ಕೆ ಈ ಮೊದಲು ಪಟ್ಟಿ ಸಿದ್ಧಗೊಂಡಿದ್ದರೂ ಹೈಕಮಾಂಡ್ ಹಸಿರು ನಿಶಾನೆ ಇಲ್ಲದೆ ನೆನೆಗುದಿಗೆ ಬಿದ್ದಿತ್ತು. ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ನಿಗಮ, ಮಂಡಳಿ ಅಧ್ಯಕ್ಷರ ನೇಮಕಾತಿ ಪಟ್ಟಿಗೆ ಹಸಿರು ನಿಶಾನೆ ತೋರಿದ್ದರಿಂದ ಮುಖ್ಯಮಂತ್ರಿಗಳು ನೇಮಕಾತಿ ನಡೆಸಿದ್ದಾರೆ. ಒಟ್ಟು 21 ಶಾಸಕರು, 70 ಕಾರ್ಯಕರ್ತರಿಗೆ ಸ್ಥಾನ ಮಾನ ನೀಡಲಾಗಿದೆ.

ಪಿರಿಯಾಪಟ್ಟಣ ಶಾಸಕ ಎಂ ವೆಂಕಟೇಶ್, ಹುಮ್ನಾಬಾದ್ ಕ್ಷೇತ್ರದ ಶಾಸಕ ರಾಜಶೇಖರ್ ಪಾಟೀಲ್, ಅಫ್ಜಲ್ ಪುರ ಶಾಸಕ ಮಾಲೀಕಯ್ಯ ಗುತ್ತೇದಾರ್, ರೋಣ ಶಾಸಕ ಜಿಎಸ್ ಪಾಟೀಲ್  ಅವರು ಸ್ಥಾನಮಾನ ಪಡೆದವರಲ್ಲಿ ಪ್ರಮುಖರು.

ಯಾರ್ಯಾರಿಗೆ ಯಾವ್ಯಾವ ಸ್ಥಾನ:

 • ಎಂಟಿಬಿ ನಾಗರಾಜ್ : ಆಹಾರ ನಿಗಮದ ಅಧ್ಯಕ್ಷ.
 • ಆರ್ ವಿ ದೇವರಾಜ್ : ಸ್ಲಮ್ ಬೋರ್ಡ್ ಅಧ್ಯಕ್ಷ
 • ರಾಜಶೇಖರ್ : ಭೂಸೇನಾ ನಿಗಮ ನಿಯಮಿತ.
 • ಶಾಸಕ ವೆಂಕಟೇಶ್ : ಬಿಡಿಎ ಅಧ್ಯಕ್ಷ.
 • ಶಾಸಕ ಮಾಲೀಕಯ್ಯ ಗುತ್ತೇದಾರ್ : ಕರ್ನಾಟಕ ಗೃಹ ಮಂಡಳಿ.
 • ಶಾಸಕ ಡಿ. ಸುಧಾಕರ್ : ರಾಜ್ಯ ವಿದ್ಯುನ್ಮಾನ ನಿಗಮ.
 • ಶಾರದಾ ಮೋಹನ್ ಶೆಟ್ಟಿ : ಕರಾವಳಿ ಅಭಿವೃದ್ಧಿ ಪ್ರಾಧಿಕಾರ.
 • ಹಂಪಯ್ಯ : ಅಚ್ಚುಕಟ್ಟು ಅಭಿವೃದ್ಧಿ ಪ್ರಾಧಿಕಾರ.
 • ಪುಟ್ಟರಂಗಶೆಟ್ಟಿ : ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ.
 • ವಸಂತ ಬಂಗೇರ : ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮ.
 • ಬಿ.ಆರ್. ಯಾವಗಲ್ : ಹಟ್ಟಿ ಚಿನ್ನದ ಗಣಿ ನಿಗಮ.
 • ಶಾಸಕ ಬಾಬುರಾವ್ ಚಿಂಚನಸೂರ್ : ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರ.
 • ಶಾಸಕ ಗೋಪಾಲ ಪೂಜಾರಿ : ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ.
 • ಶಾಸಕ ಫಿರೋಜ್ ಸೇಠ್ : ಪ್ರವಾಸೋದ್ಯಮ ಅಭಿವೃದ್ಧಿ ನಿಗಮ.
 • ರಹೀಂ ಖಾನ್ : ರಾಜ್ಯ ಉಗ್ರಾಣ ನಿಗಮ ಅಧ್ಯಕ್ಷ.
 • ಜಿಎಸ್ ಪಾಟೀಲ್ : ನವೀಕರಿಸಬಹುದಾದ ಇಂಧನ ನಿಗಮ.

Leave a Reply

comments

Related Articles

error: