ಮೈಸೂರು

ಬಾರ್ ನಲ್ಲಿ ಕೆಲಸ ಮಾಡುತ್ತಿದ್ದ ಯುವಕ ನೇಣಿಗೆ ಶರಣು

ಮೈಸೂರು,ಸೆ.23:- ಬಾರ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಯುವಕನೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮೈಸೂರಿನಲ್ಲಿ ನಡೆದಿದೆ.

ನೇಣಿಗೆ ಶರಣಾದವನನ್ನು ಚಾಮರಾಜನಗರ ನಿವಾಸಿ ಕಾರ್ತೀಕ್(25)ಎಂದು ಹೇಳಲಾಗಿದೆ. ಈತ ಬೋಗಾದಿ ಮುಖ್ಯರಸ್ತೆಯಲ್ಲಿರುವ ದಟ್ಟಗಳ್ಳಿಯ ಬಾಲಾಜಿ ಬಾರೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದ. ಬಾರ್ ನವರೇ ಉಳಿದುಕೊಳ್ಳಲು ರೂಮೊಂದನ್ನು ನೀಡಿದ್ದರು. ಆದರೆ ಶನಿವಾರ ಎಷ್ಟು ಹೊತ್ತು ಆದರೂ ಆತ ರೂಮಿನಿಂದ ಹೊರಬಂದಿರಲಿಲ್ಲ. ತನ ಜೊತೆ ಕೆಲಸ ಮಾಡುತ್ತಿದ್ದವರು ಹೋಗಿ ಬಾಗಿಲು ಬಡಿದರೂ ಏಳದ ಕಾರಣ ಬಾಗಿಲು ಮುರಿದು ನೋಡಲಾಗಿ ಈತ ನೇಣಿಗೆ ಶರಣಾಗಿರುವುದು ಕಂಡು ಬಂತು. ಸ್ಥಳಕ್ಕೆ ಸರಸ್ವತಿಪುರಂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಸರಸ್ವತಿಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಕೆ.ಎಸ್,ಎಸ್.ಎಚ್)

 

Leave a Reply

comments

Related Articles

error: