ಮೈಸೂರು

ಚಿಯಾ ಬೆಳೆ ಮಾರಾಟಕ್ಕೆ ಚಿಲ್ಲರೆ ಮಾರಾಟ ವ್ಯವಸ್ಥೆ ಆರಂಭ: ಕುರುಬೂರು ಶಾಂತಕುಮಾರ್

ಮೈಸೂರು, ಸೆ.೨೩: ರೈತಮಿತ್ರ ಫಾರ್ಮರ್ಸ್ ಪ್ರೊಡ್ಯೂಸರ್ ಕಂಪನಿಯ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ರೇಸ್‌ಕೋರ್ಸ್ ಹಿಂಭಾಗದ ಚೇತನ್ ಗಾರ್ಡನ್‌ನಲ್ಲಿ ಶನಿವಾರ ನಡೆಯಿತು.
ಕಾರ್ಯಕ್ರಮವನ್ನು ಅಧ್ಯಕ್ಷ ಕುರುಬೂರು ಶಾಂತಕುಮಾರ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಚಿಯಾ ಬೆಳೆಯನ್ನು ಬೆಳೆಯುವ ರೈತರನ್ನು ಪ್ರೋತ್ಸಾಹಿಸಿ ಕನಿಷ್ಠ ೫೦ ಟನ್‌ಗಳನ್ನು ಬೆಳೆಸಿ ವ್ಯಾಪಾರ ವಹಿವಾಟು ನಡೆಸಲು ಕಾರ್ಯ ಯೋಜನೆ ಹಮ್ಮಿಕೊಳ್ಳಲಾಗಿದೆ. ಕಂಪನಿಯಿಂದ ನೇರವಾಗಿ ಚಿಯಾ ಬೀಜ ಮಾರಾಟಕ್ಕಾಗಿ ಸಿಎಫ್‌ಟಿಆರ್‌ಐ ತಂತ್ರಜ್ಞಾನ ಸಹಕಾರದೊಂದಿಗೆ ಚಿಲ್ಲರೆ ಮಾರುಕಟ್ಟೆ ವ್ಯವಸ್ಥೆ ಆರಂಭಿಸಲಾಗುವುದು. ಹಣ್ಣು ತರಕಾರಿ ಬೆಳೆಯುವ ರೈತರಿಗೆ ರಸಗೊಬ್ಬರ, ಕೀಟನಾಶಕ, ಕಡಿಮೆ ಬಳಸಿ ಹೆಚ್ಚು ಉತ್ಪಾದನೆ ಮಾಡಬಹುದಾದ ತಂತ್ರಜ್ಞಾನಗಳ ಬಗ್ಗೆ ಅರಿವು ಮೂಡಿಸಲಾಗುವುದು. ಹಣ್ಣು ತರಕಾರಿಗಳ ಸಂಸ್ಕರಣೆ, ಶುದ್ಧೀಕರಣ, ಗ್ರೇಡಿಂಗ್ ಮಾಡಲು ಘಟಕ ಆರಂಭಿಸಲಾಗುವುದು ಎಂದ ಅವರು, ರಸಗೊಬ್ಬರ ಮಾರಾಟ ಕೇಂದ್ರಗಳಲ್ಲಿ ಗುಣಮಟ್ಟದ ಬಿತ್ತನೆ ಬೀಜ ರೈತರಿಗೆ ಪೂರೈಸಲು ಚಿಂತನೆ ನಡೆಸಿದ್ದು ೨೦೧೭-೧೮ನೇ ಸಾಲಿನಲ್ಲಿ ೨.೫ ಕೋಟಿ ರಸಗೊಬ್ಬರ ವಹಿವಾಟು ನಡೆಸಲು ಯೋಜಿಸಲಾಗಿದೆ ಎಂದು ಹೇಳಿದರು.
ಸಭೆಯಲ್ಲಿ ನಿರ್ದೇಶಕರಾದ ಟಿ.ವಿ.ಗೋಪಿನಾಥ್, ಸುಭಾಷ್ ಎ ಪಾಟೀಲ್, ಎಂ.ಜಿ.ಸಿಂದಗಿ ಕೆ.ಎಸ್.ನಾಗರಾಜಮೂರ್ತಿ, ಎಸ್.ಬಿ.ಸಿದ್ನಾಳ್, ಮೋಹನ್ ಎಂ.ಪಂಡಿತ್, ಬಾಜಿರಾವ್ ಎ.ದೇಶಪಾಂಡೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. (ವರದಿ ಬಿ.ಎಂ)

Leave a Reply

comments

Related Articles

error: