ಮೈಸೂರು

ದೇವಸ್ಥಾನಕ್ಕೆ ಕದಿಯಲು ಬಂದ ಕಳ್ಳ ಶನೇಶ್ವರನಿಗೆ ಹೆದರಿ ಪರಾರಿ

ಮೈಸೂರು,ಸೆ.23:-  ಕಳ್ಳನೋರ್ವ ದೇವಸ್ಥಾನಕ್ಕೆ ಕದಿಯಲೆಂದು ಬಂದು ಶನೇಶ್ವರನಿಗೆ ಹೆದರಿ ಬರಿಗೈಲಿ ವಾಪಸ್ಸಾದ ಘಟನೆ ನಡೆದಿದೆ.

ಮೈಸೂರಿನ ದಟ್ಟಗಳ್ಳಿಯಲ್ಲಿರುವ ಶನೇಶ್ವರ ದೇಗುಲದಲ್ಲೊಂದು ಸ್ವಾರಸ್ಯ ನಡೆದಿದ್ದು, ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಶುಕ್ರವಾರ ರಾತ್ರಿ ಶನೇಶ್ವರ ದೇಗುಲಕ್ಕೆ ನುಗ್ಗಿ ಕಳ್ಳತನ ಮಾಡಲು ಬಂದ ಕಳ್ಳನಿಗೆ ಅದು ಶನೇಶ್ವರ ದೇಗುಲ ಎಂಬುದು ಗೊತ್ತಿರಲಿಲ್ಲ. ಗೇಟ್ ತೆಗೆದು ಒಳಗೆ ಬಂದ ಕಳ್ಳನಿಗೆ ಅದು ಶನೇಶ್ವರ ದೇಗುಲ ಎಂಬುದು ಗೊತ್ತಾಗುತ್ತಿದ್ದಂತೆ ಕಳ್ಳತನ ಮಾಡದೆ ವಾಪಸ್ ಹೋಗಿದ್ದಾನೆ. ಈ ದೃಶ್ಯ ದೇವಾಲಯದಲ್ಲಿ ಅಳವಡಿಸಲಾದ ಸಿಸಿಟಿವಿಯಲ್ಲಿ ಸೆರೆಯಾಗಿದೆ. (ಆರ್.ವಿ,ಕೆ.ಎಸ್.ಎಚ್.ಎಚ್)

Leave a Reply

comments

Related Articles

error: