ಮೈಸೂರು

ಮಹಿಳೆಯ ಗಮನ ಬೇರೆಡೆ ಸೆಳೆದು ಚಿನ್ನಾಭರಣ ದೋಚಿದ ಕಳ್ಳಿಯರು

ಮೈಸೂರು,ಸೆ.23:- ಹಾಡುಹಗಲೇ ಮಹಿಳೆಯ ಗಮನ ಬೇರೆಡೆಗೆ ಸೆಳೆದು  ಚಿನ್ನಾಭರಣವನ್ನು ಕಳ್ಳಿಯರು ಎಗರಿಸಿದ ಘಟನೆ ಮೈಸೂರಿನಲ್ಲಿ ನಡೆದಿದೆ.

ಮೈಸೂರಿನಲ್ಲಿ ಕಳ್ಳತನ ಮತ್ತೆ ಮುಂದುವರಿದಿದೆ. ನಗರದ ಹಾರ್ಡಿವಿಂಗ್ ವೃತ್ತದ ಬಳಿ ಮಹಿಳೆಯ ಗಮನವನ್ನು ಬೇರೆಡೆಗೆ ಸೆಳೆದು ಸುಮಾರು 130 ಗ್ರಾಂ ಚಿನ್ನಾಭರಣವವನ್ನು ಕಳ್ಳಿಯರು ಕಸಿದು ಪರಾರಿಯಾಗಿದ್ದಾರೆ. ಆಭರಣವನ್ನು ಕಳೆದುಕೊಂಡ ಮಹಿಳೆಯನ್ನು ನಂಜನಗೂಡು ತಾಲೂಕು ಕಣೇನೂರು ಗ್ರಾಮದ ನಿವಾಸಿ ಉಮಾ  ಎಂದು ಹೇಳಲಾಗಿದೆ. ವೈಯಕ್ತಿಕ ಕಾರ್ಯಕ್ರಮಕ್ಕೆ ಉಮಾ  ಮೈಸೂರಿಗೆ ಬಂದಿದ್ದರು. ಇದೇ ಸಂದರ್ಭ ಕಳ್ಳತನ ನಡೆದಿದೆ. ಈ ಸಂಬಂಧ ಉಮಾ ದೇವರಾಜ ಪೋಲಿಸ್ ಠಾಣೆಗೆ ದೂರು ನೀಡಿದ್ದು, ದೂರಿನಲ್ಲಿ  ಸರಿಸುಮಾರು 4 ಲಕ್ಷ ರೂ ಬೆಳೆಬಾಳುವ ಚಿನ್ನಾಭರಣ ಕಳ್ಳತನವಾಗಿರುವ ಕುರಿತು ದೂರಿನಲ್ಲಿ ಉಲ್ಲೇಖಿಸಿದ್ದಾರೆ. (ಆರ್.ವಿ.ಎಸ್.ಎಚ್)

Leave a Reply

comments

Related Articles

error: