ಮೈಸೂರು

ಪಾರ್ಕ್ ಮಾಡಿದ್ದ ಕಾರಿಂದ 4.40 ಲಕ್ಷ ರು. ಕಳವು

ನಗರದ ಸೀತಾ ವಿಲಾಸ ರಸ್ತೆ ಬಳಿ ಪಾರ್ಕ್ ಮಾಡಿದ್ದ ಕಾರೊಂದರಿಂದ ಬುಧವಾರ ಬೆಳಗ್ಗೆ ಹಣ ಕಳವಾಗಿರುವುದು ವರದಿಯಾಗಿದೆ.

ತಮಿಳುನಾಡು ಮೂಲದ ಅಬ್ದುಲ್ ನಝೀರ್ ಎಂಬುವರು ಮಾರುತಿ 800 ಕಾರಿನಲ್ಲಿ 4.40 ಲಕ್ಷ ರು. ದುಡ್ಡು ಇಟ್ಟು ಪಾನೀಯ ಖರೀದಿಸಲೆಂದು ತೆರಳಿದ್ದರು. ಈ ವೇಳೆ ಕಳ್ಳರು ಕಾರಿನ ಬಾಗಿಲಿನ ಮೂಲಕ ಹಣ ಎಗರಿಸಿ ಪರಾರಿಯಾಗಿದ್ದಾರೆ. 15 ನಿಮಿಷದೊಳಗೆ ಈ ಕೃತ್ಯ ನಡೆದಿದ್ದು, ದೇವರಾಜ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

 

Leave a Reply

comments

Related Articles

error: