ಪ್ರಮುಖ ಸುದ್ದಿಮೈಸೂರು

ದಸರಾ ಪ್ರಯುಕ್ತ ಯೋಗೋತ್ಸವಕ್ಕೆ ಚಾಲನೆ : ಅರಮನೆಯ ಮುಂದೆ ಯೋಗಪ್ರದರ್ಶಿಸಿದ ಯೋಗಪಟುಗಳು

ಮೈಸೂರು,ಸೆ.24:- ನಾಡ ಹಬ್ಬ ದಸರಾ ಮಹೋತ್ಸವದ ಅಂಗವಾಗಿ ಭಾನುವಾರ ಬೆಳಿಗ್ಗೆ ಯೋಗೋತ್ಸವ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.

ಅರಮನೆ ಅಂಗಳದಲ್ಲಿ  ಆಯೋಜಿಸಿದ್ದ ಕಾರ್ಯಕ್ರಮವನ್ನು ಶಾಸಕ ಎಂ.ಕೆ.ಸೋಮಶೇಖರ್ ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು. ಮುಂಜಾನೆ 6 ಗಂಟೆಗೆ ಸರಿಸುಮಾರು ಎರಡು ಸಾವಿರಕ್ಕೂ ಅಧಿಕ ಮಂದಿ ಯೋಗೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.ಯೋಗಾಸ್ತರು, ವಿದ್ಯಾರ್ಥಿಗಳು, ಸಾರ್ವಜನಿಕರು ಅರಮನೆ ಆವರಣದಲ್ಲಿ ಸಮಾವೇಶಗೊಂಡಿದ್ದರು. ಮೊದಲಿಗೆ ಪ್ರಾರ್ಥನೆ ಮೂಲಕ ಆರಂಭವಾದ ಯೋಗ,ನಂತರ ಚಾಲನಾ ಕ್ರಿಯೆಗಳು, ಸೂರ್ಯ ನಮಸ್ಕಾರ,  ಪ್ರಾಣಾಯಾಮ, ಶವಾಸನ, ಧ್ಯಾನ, ಶಾಂತಿ ಮಂತ್ರ, ಯೋಗಾಸನದ ವಿವಿಧ ಭಂಗಿಗಳನ್ನು ಪ್ರದರ್ಶಿಸಿದರು.

ಎಲ್ಲರೂ ಬಹಳ ಉತ್ಸಾಹದಿಂದ ಯೋಗೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.ಶ್ರೀ ಪತಂಜಲಿ ಯೋಗಶಿಕ್ಷಣ ಸಮಿತಿ , ಮೈಸೂರು ಜಿಲ್ಲಾ ಯೋಗ ಸ್ಪೋರ್ಟ್ಸ್ ಫೌಂಡೇಷನ್, ಜಿ.ಎಸ್.ಎಸ್ ಯೋಗಿಕ್ ರಿಸರ್ಚ್ ಫೌಂಡೇಷನ್, ಮೈಸೂರು ಯೋಗ ಒಕ್ಕೂಟ, ಪತಂಜಲಿ ಯೋಗ ಸಮಿತಿ ಮತ್ತು ಭಾರತ ಸ್ವಾಭಿಮಾನ ಟ್ರಸ್ಟ್,  ಮೈಸೂರು ಯೋಗ ಅಸೋಸಿಯೇಷನ್ ಈ ಯೋಗೋತ್ಸವದಲ್ಲಿ ಭಾಗಿಯಾಗಿದ್ದರು. ಕಾರ್ಯಕ್ರಮದಲ್ಲಿ ಪಾಲಿಕೆಯ ಆಯುಕ್ತರು ಹಾಗೂ ಯೋಗ ದಸರಾ ಉಪಸಮಿತಿಯ ಉಪವಿಶೇಷಾಧಿಕಾರಿ ಜಿ.ಜಗದೀಶ್, ಸಮಿತಿಯ ಕಾರ್ಯಾಧ್ಯಕ್ಷರಾದ ರಮ್ಯ, ಕಾರ್ಯದರ್ಶಿ ಡಾ.ಬಿ.ಎಸ್.ಸೀತಾಲಕ್ಷ್ಮಿ,ಸುಶೀಲಾ ಸುಂದರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: