ಮೈಸೂರು

ಚಿತ್ರಕಲಾ ಸ್ಪರ್ಧೆ ನ.6 ರಂದು

ಅಂತಾರಾಷ್ಟ್ರೀಯ ಲಯನ್ಸ್ ಸಂಸ್ಥೆ, ಜಿಲ್ಲೆ 317-ಎ ಸಂಸ್ಥೆಯ ವತಿಯಿಂದ 11 ರಿಂದ 13 ವರ್ಷ ವಯೋಮಿತಿಯ ವಿದ್ಯಾರ್ಥಿಗಳಿಗೆ ನ.6 ರ ಬೆ.11 ಗಂಟೆಗೆ ಸಿದ್ಧಾರ್ಥನಗರದಲ್ಲಿರುವ ಪ್ರಾದೇಶಿಕ ಪ್ರಾಕೃತಿಕ ವಿಜ್ಞಾನ ಸಂಗ್ರಹಾಲಯದಲ್ಲಿ ‘ಶಾಂತಿ ಉತ್ಸವ’ ಎಂಬ ವಿಷಯದ ಬಗ್ಗೆ ಚಿತ್ರಕಲಾ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ ಎಂದು ಸಂಸ್ಥೆಯ ವಲಯ ಅಧ್ಯಕ್ಷ ಆರ್.ಡಿ.ಕುಮಾರ್ ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಜಿಲ್ಲೆಯ ಮಾಜಿ ರಾಜ್ಯಪಾಲ ಕೆ.ದೇವೇಗೌಡ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಪೀಸ್ ಪೋಸ್ಟರ್ ಜಿಲ್ಲಾಧ್ಯಕ್ಷ ಲಯನ್ ಟಿ.ಎಸ್. ಶಶಿಕುಮಾರ್ ಅಧ‍್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಂಸ್ಥೆಯ ಜಿಲ್ಲಾ ರಾಜ್ಯಪಾಲ ಲಯನ್ ಎಂ. ಅನಿಲ್ ಕುಮಾರ್, ಸ್ನೇಕ್ ‍ಶಾಂ, ವಿಜ್ಞಾನಿ ಡಾ.ಜಿ.ಎನ್.ಇಂದ್ರೇಶ್, ‍ಪ್ರಾಚಾರ್ಯ ಟಿ.ಆರ್.ನಾರಾಯಣಗೌಡ, ಲಯನ್ ಶಾಲಿನಿ ನಾಗರಾಜ್ ಉಪಸ್ಥಿತರಿರುತ್ತಾರೆ ಎಂದು ಹೇಳಿದರು.

ಈ ಸ್ಪರ್ಧೆಯಲ್ಲಿ ಸುಮಾರು 700 ರಿಂದ 800 ವಿದ್ಯಾರ್ಥಿಗಳು ಬಾಗವಹಿಸಲಿದ್ದು, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು ವಿದ್ಯಾರ್ಥಿಗಳು ಭಾಗವಹಿಸಲು ಅನುಮತಿ ನೀಡಿರುತ್ತಾರೆ. ಅನುದಾನ ರಹಿತ ಶಾಲೆಗಳಿಗೂ ಸಹ ಅವಕಾಶವಿರುತ್ತದೆ.  ಜಿಲ್ಲಾ ಮಟ್ಟದಲ್ಲಿ ಆಯ್ಕೆಯಾದ ವಿದ್ಯಾರ್ಥಿಯ ಚಿತ್ರಕಲೆಯನ್ನು ಮಲ್ಟಿಪಲ್ ಜಿಲ್ಲೆಗೆ ಕಳುಹಿಸಲಾಗುವುದು. ಅಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳ ಚಿತ್ರಕಲೆಯನ್ನು  ಅಂತರಾಷ್ಟ್ರೀಯ ಮಟ್ಟದ ಆಯ್ಕೆಗೆ ಕಳುಹಿಸಲಾಗುವುದು. ಅಲ್ಲಿ ಆಯ್ಕೆಯಾದವರಿಗೆ 5,000 ಡಾಲರ್ ಬಹುಮಾನ ನೀಡಲಾಗುತ್ತದೆ. ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನವೆಂದು ಒಟ್ಟು 21 ಬಹುಮಾನಗಳನ್ನು ನೀಡಲಾಗುತ್ತದೆ. ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ನೀಡಲಾಗುವುದು ಎಂದು ತಿಳಿಸಿದರು.

ಸಂಸ್ಥೆಯ ಪದಾಧಿಕಾರಿಗಳಾದ ವಿರೂಪಾಕ್ಷಪ್ಪ, ಶಶಿಕುಮಾರ್, ಅಶ್ವತ್ಥನಾರಾಯಣ, ಗಂಗಾಧರಪ್ಪ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

Leave a Reply

comments

Related Articles

error: