ಕರ್ನಾಟಕಮೈಸೂರು

ಸೆ.24 ರಂದು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರ ಪ್ರವಾಸ

ಮಂಡ್ಯ, ಸೆ. 23 : ವಸತಿ ಸಚಿವರು ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಎಂ.ಕೃಷ್ಣಪ್ಪ ಅವರು ಸೆ.24 ರಂದು ಮಂಡ್ಯ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿದ್ದಾರೆ.

ಅಂದು ಮಧ್ಯಾಹ್ನ1 ಗಂಟೆಗೆ ಮಂಡ್ಯ ತಾಲ್ಲೂಕು ಹೆಚ್.ಕೋಡಿಹಳ್ಳಿ ಕೆರೆಗೆ ಬಾಗಿನ ಅರ್ಪಿಸುವ ಕಾರ್ಯಕ್ರಮದಲ್ಲಿ ಭಾಗವಹಿಸುವರು. ನಂತರ ಮಧ್ಯಾಹ್ನ 2.45 ಗಂಟೆಗೆ  ಶ್ರೀರಂಗಪಟ್ಟಣ ಸರ್ಕಾರಿ ಅತಿಥಿಗೃಹ ಆಗಮಿಸುವರು, ನಂತರ ಮಧ್ಯಾಹ್ನ 3 ಗಂಟೆಗೆ ಶ್ರೀರಂಗಪಟ್ಟಣದ ತಾಲ್ಲೂಕಿನ ಕಿರಂಗೂರಿನಲ್ಲಿ ದಸರಾಉತ್ಸವದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸುವರು.

ಸಂಜೆ 6 ಗಂಟೆಗೆ ಶ್ರೀರಂಗಪಟ್ಟಣ ಶ್ರೀರಂಗ ವೇದಿಕೆಯಲ್ಲಿ ದಸರಾ ಉತ್ಸವದ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸುವರು. ಸಂಜೆ 6.45 ಗಂಟೆಗೆ ಕೃಷ್ಣರಾಜ ಸಾಗರದಲ್ಲಿ ಬೆಳಕು ಉತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸುವರು ಎಂದು ಸಚಿವರ ಆಪ್ತ ಕಾರ್ಯದರ್ಶಿಗಳು ತಿಳಿಸಿದ್ದಾರೆ.

(ಎನ್.ಬಿ)

Leave a Reply

comments

Related Articles

error: