
ಮಂಡ್ಯ, ಸೆ.24 : ಜಿಲ್ಲಾಡಳಿತ ಮಂಡ್ಯ ವತಿಯಿಂದ ಶ್ರೀರಂಗಪಟ್ಟಣ ನಾಡಹಬ್ಬದಸರಾ ಮಹೋತ್ಸವಕ್ಕೆದಸರಾ ಕವಿ-ಕಾವ್ಯ-ಸಂಭ್ರಮದ ಅಂಗವಾಗಿ ಸೆಪ್ಟೆಂಬರ್ 25 ರಂದುದಸರಾ ಕವಿಗೋಷ್ಠಿಯನ್ನು ಹಮ್ಮಿಕೊಳ್ಳಲಾಗಿದೆ.
ಸೆಪ್ಟೆಂಬರ್ 25ರಂದು ಬೆಳಿಗ್ಗೆ 10 ಗಂಟೆಗೆಯುವ ಕವಿಗೋಷ್ಠಿಯನ್ನು ಶ್ರೀರಂಗಪಟ್ಟಣ ಸಕಾರಿ ಪದವಿ ಕಾಲೇಜಿನಲ್ಲಿ ಏರ್ಪಡಿಸಲಾಗಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು ಡಾ. ಸುಜಯ್ಕುಮಾರ್ ಅವರು ನಡೆಸಿಕೊಡಲಿದ್ದು, ಡಾ.ಸುಧಾಕರ್ ಅವರುಅಧ್ಯಕ್ಷತೆ ವಹಿಸುವರು. ಖ್ಯಾತ ಸಾಹಿತಿಗಳಾದ ಜಯಪ್ಪ ಹೊನ್ನಾಳ್ಳಿ ಅವರು ಕವಿಗೋಷ್ಠಿ ಅಧ್ಯಕ್ಷತೆ ವಹಿಸುವರು.
ಸೆಪ್ಟೆಂಬರ್ 25 ರಂದು ಮಧ್ಯಾಹ್ನ 2 ಗಂಟೆಗೆ ಶ್ರೀರಂಗಪಟ್ಟಣದ ಶ್ರೀರಂಗ ವೇದಿಕೆಯಲ್ಲಿ 2ನೇ ಕವಿಗೋಷ್ಠಿಯನ್ನು ಏರ್ಪಡಿಸಲಾಗಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು ಪ್ರೊ.ಕರೀಮುದ್ದಿನ್ ಅವರು ನಡೆಸಿಕೊಡಲಿದ್ದು, ಸಿ.ಕೆ.ರವಿಕುಮಾರ ಚಾಮಲಾಪುರ ಅವರು ಅಧ್ಯಕ್ಷತೆ ವಹಿಸುವರು. ಸಾಹಿತಿಗಳಾದ ಡಾ.ಪ್ರದೀಪ್ಕುಮಾರ್ ಹೆಬ್ರಿ ಅವರು ಕವಿಗೋಷ್ಠಿ ಅಧ್ಯಕ್ಷತೆ ವಹಿಸಿದ್ದಾರೆ ಎಂದು ತಿಳಿದುಬಂದಿದೆ.
(ಎನ್.ಬಿ)