ಮೈಸೂರು

ಡಿ ಆರ್ ಸಿ ಚಿತ್ರಮಂದಿರದಲ್ಲಿ ರಾಜಕುಮಾರ ಚಿತ್ರ ವೀಕ್ಷಿಸಿದ ಮಾವುತ, ಕಾವಾಡಿಗರ ಕುಟುಂಬ

ಮೈಸೂರು,ಸೆ.24:- ಭಾನುವಾರ ಬೆಳಿಗ್ಗೆ ಮಾವುತರು ಹಾಗೂ ಕಾವಾಡಿಗರ ಕುಟುಂಬದವರಲ್ಲಿ ಸಂತಸ ನಿರ್ಮಾಣವಾಗಿತ್ತು. ಯಾಕೆಂದರೆ ಇದೇ ಮೊದಲ ಬಾರಿಗೆ ಅವರು ಡಿ.ಆರ್.ಸಿ. ಚಿತ್ರಮಂದಿರದಲ್ಲಿ ಚಲನಚಿತ್ರವನ್ನು ವೀಕ್ಷಿಸುತ್ತಿದ್ದರು.

ಮೈಸೂರು ಜಿಲ್ಲಾಧಿಕಾರಿ ಡಿ.ರಂದೀಪ್ ಇದೇ ಮೋದಲಬಾರಿಗೆ ಮೈಸೂರು ದಸರಾ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳುವ ಆನೆಗಳ ಮಾವುತರು ಮತ್ತು ಕಾವಾಡಿಗಳ ಕುಟುಂಬಿಕರಿಗೆ ಡಿಆರ್ ಸಿ ಚಿತ್ರಮಂದಿರದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ರಾಜಕುಮಾರ್ ಚಲನಚಿತ್ರವನ್ನು ವೀಕ್ಷಿಸುವ ಅವಕಾಶವನ್ನು ಕಲ್ಪಿಸಿದ್ದರು.  ಡಿಆರ್ ಸಿ ಚಿತ್ರಮಂದಿರದಲ್ಲಿ ಚಲನಚಿತ್ರ ವೀಕ್ಷಿಸಿದ ಅಭಿಮನ್ಯು ಆನೆಯ ಮಾವುತ ವಸಂತ ಮಾತನಾಡಿ ನಾವು ಹಾಡಿಗಳ ಜನ. ಟೆಂಟ್ ಗಳಲ್ಲಿ  ಚಿತ್ರ ನೋಡುತ್ತಿದ್ದೆವು. ಇದೇ ಮೊದಲಬಾರಿಗೆ ಇಷ್ಟು ದೊಡ್ಡ ಚಿತ್ರಮಂದಿರದಲ್ಲಿ ಚಿತ್ರ ವೀಕ್ಷಿಸುತ್ತಿದ್ದೇವೆ. ಖುಷಿಯಾಗುತ್ತಿದೆ. ಅದರಲ್ಲೂ  ರಾಜಕುಮಾರ ಮತ್ತವರ ಮಕ್ಕಳು ನಟಿಸಿದ ಚಿತ್ರಗಳೆಂದರೆ ಇಷ್ಟ  ಈ ಅವಕಾಶವನ್ನು ಕಲ್ಪಿಸಿದ ಜಿಲ್ಲಾಧಿಕಾರಿಗಳಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇವೆ ಎಂದರು.

ಭಾನುವಾರ ಮಧ್ಯಾಹ್ನ 4ಗಂಟೆಗೆ ಆಪರೇಷನ್ ಅಲಮೇಲಮ್ಮ ಚಿತ್ರವನ್ನೂ ಅವರಿಗೆ ತೋರಿಸಲಾಗುತ್ತಿದೆ. ವಾರ್ತಾಧಿಕಾರಿ ನಿರ್ಮಲಾ, ಚಲನಚಿತ್ರ ಚಿತ್ರೋತ್ಸವ ಸಮಿತಿಯ ಉಪಾಧ್ಯಕ್ಷ ರಾಮಚಂದ್ರ, ಫಾರೆಸ್ಟ್ ಇನ್ಸಪೆಕ್ಟರ್ ಆ್ಯಂಟನಿ, ವಾರ್ತಾ ಇಲಾಖೆಯ ಉಪನಿರ್ದೇಶಕ ರಾಜು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: