
ದೇಶ
ಅತ್ಯಾಚಾರ ಆರೋಪ ಪೊಲೀಸರಿಗೆ ಶರಣಾದ ಬಾಲಿವುಡ್ ನಿರ್ಮಾಪಕ
ಹೈದರಾಬಾದ್,ಸೆ.24-ಯುವತಿ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನ ನಿರ್ಮಾಪಕ ಕರೀಂ ಮೊರಾನಿ ಪೊಲೀಸರಿಗೆ ಶರಣಾಗಿದ್ದಾರೆ. ಸರ್ವೋಚ್ಚ ನ್ಯಾಯಾಲಯ ಜಾಮೀನು ಅರ್ಜಿ ತಿರಸ್ಕರಿಸಿದ ಹಿನ್ನೆಲೆಯಲ್ಲಿ ನಗರದ ಹಯಾತ್ ನಗರ ಪೊಲೀಸರಿಗೆ ಮೊರಾನಿ ಶರಣಾಗಿದ್ದಾರೆ. ಮೊರಾನಿ ಅವರನ್ನು ಹದಿನಾಲ್ಕು ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ದೆಹಲಿ ಮೂಲದ 25 ವರ್ಷದ ನಟಿಯ ಮೇಲೆ ಅತ್ಯಾಚಾರ ಎಸಗಿದ ಆರೋಪವನ್ನು ಮೊರಾನಿ ಎದುರಿಸುತ್ತಿದ್ದಾರೆ. ಹೈದರಾಬಾದಿನ ರಾಮೋಜಿ ಫಿಲಂ ಸಿಟಿಯಲ್ಲಿ ಹಲವು ಬಾರಿ ಮೊರಾನಿ ಅತ್ಯಾಚಾರ ಎಸಗಿದ್ದರು. ನನ್ನ ನಗ್ನ ಫೋಟೋಗಳನ್ನು ತೆಗೆದು ಅದನ್ನು ಸಾಮಾಜಿಕ ತಾಣದಲ್ಲಿ ಹಾಕುವುದಾಗಿ ಬೆದರಿಕೆ ಹಾಕುತ್ತಿದ್ದರು ಎಂದು ಯುವತಿ ಮೊರಾನಿ ವಿರುದ್ದ ದೂರು ಸಲ್ಲಿಸಿದ್ದರು. ಹೈದರಾಬಾದ್ ನ್ಯಾಯಾಲಯ ನಿರೀಕ್ಷಣಾ ಜಾಮೀನು ತಿರಸ್ಕರಿಸಿದ ನಂತರ ಮೊರಾನಿ ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು. ಅಲ್ಲೂ ಜಾಮೀನು ಸಿಗದ ಹಿನ್ನೆಲೆ ಮೊರಾನಿ ಪೊಲೀಸರಿಗೆ ಶರಣಾಗಿದ್ದಾರೆ. ಮೊರಾನಿ 2ಜಿ ಹಗರಣದಲ್ಲೂ ಆರೋಪಿಯಾಗಿದ್ದರು.
ಸಿನಿಯುಗ್ ಎನ್ನುವ ಕಂಪೆನಿಯ ಮಾಲೀಕರಾರಿಗಿರುವ ಮೊರಾನಿ, ಚೈನ್ನೈ ಎಕ್ಸ್ ಪ್ರೆಸ್ ಚಿತ್ರದ ನಿರ್ಮಾಪಕರೊಲ್ಲಬ್ಬರು. ದಿಲ್ವಾಲೆ, ರಾ ಒನ್, ನ್ಯೂಇಯರ್ ಮುಂತಾದ ಚಿತ್ರಗಳನ್ನೂ ಕರೀಂ ಮೊರಾನಿ ನಿರ್ಮಿಸಿದ್ದರು. (ವರದಿ-ಎಂ.ಎನ್)