ಮೈಸೂರು

ನಂಜನಗೂಡಿನಲ್ಲಿ ಬಾಸ್ಕೆಟ್ ಬಾಲ್ ನ 3ನೇ ಚರಣ

ಕರ್ನಾಟಕ ಬಾಸ್ಕೆಟ್ ಬಾಲ್ ಲೀಗ್  ಕರ್ನಾಟಕ ರಾಜ್ಯ ಬಾಸ್ಕೆಟ್ ಬಾಲ್ ಸಂಸ್ಥೆಯ ವತಿಯಿಂದ 3 ನೇ ಚರಣವನ್ನು ನ.4 ರಿಂದ 6 ವರೆಗೆ  ನಂಜನಗೂಡಿನ ಸರ್ಕಾರಿ ಕಾಲೇಜಿನ ಮೈದಾನದಲ್ಲಿ ಏರ್ಪಡಿಸಲಾಗಿದೆ ಎಂದು ಸಂಸ್ಥೆಯ ಜಂಟಿ ಕಾರ್ಯದರ್ಶಿ ಮೋಹನ್ ಕುಮಾರ್ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮೊದಲೆರಡು ಚರಣಗಳು ಹಾಸನ ಮತ್ತು ಬಿಜಾಪುರಗಳಲ್ಲಿ ನಡೆದಿದ್ದು, 4 ನೇ ಚರಣವು ಬೆಂಗಳೂರಿನಲ್ಲಿ ನಡೆಯಲಿದೆ. ಗ್ರಾಮೀಣ ಆಟಗಾರರಿಗೆ ಮಾತ್ರ ಈ ಅವಕಾಶ ನೀಡಲಾಗಿದೆ. ಮೈಸೂರಿನಿಂದ 4 ತಂಡ, ಕೋಲಾರದಿಂದ 2 ತಂಡ, ಮಂಡ್ಯ ಮತ್ತು ನಂಜನಗೂಡಿನಿಂದ ಒಂದೊಂದು ತಂಡ. ಒಟ್ಟು 8 ತಂಡಗಳು ಪ್ರತಿನಿಧಿಸಲಿವೆ. ಗೆದ್ದ ತಂಡಕ್ಕೆ 40,000 ನಗದು ಬಹುಮಾನ ಮತ್ತು ರನ್ನರ್ ಅಪ್ ಗಳಿಗೆ 20,000 ನಗದು ಬಹುಮಾನ ನೀಡಲಾಗುತ್ತದೆ ಎಂದು ಹೇಳಿದರು.

ಸಂಸ್ಥೆಯ ಪದಾಧಿಕಾರಿಗಳಾದ ದಿನೇಶ್, ಶ್ರೀಧರ್, ವಿಜಯ್ ಕುಮಾರ್, ನಾಗೇಂದ್ರ ಕುಮಾರ್ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

Leave a Reply

comments

Related Articles

error: