ಮೈಸೂರು

ಶಾಲೆ ಕೊಠಡಿಯಲ್ಲೇ ಹಿಂದುಳಿದ ವರ್ಗಗಳ ವಿವಿಧೋದ್ದೇಶ ಸಂಘದ ಸದಸ್ಯರ ಮಾರಾಮಾರಿ

ಮೈಸೂರು,ಸೆ.24:- ಶಾಲೆ ಕೊಠಡಿಯಲ್ಲೇ ಇಬ್ಬರ ನಡುವೆ ಮಾರಾಮಾರಿ ನಡೆದ ಘಟನೆ ಮೈಸೂರಿನಲ್ಲಿ ನಡೆದಿದೆ.

ನಗರದ ಅಕ್ಕನ ಬಳಗ ಶಾಲಾ ಕೊಠಡಿಯಲ್ಲೇ ಹಿಂದುಳಿದ ವರ್ಗಗಳ ವಿವಿಧೋದ್ದೇಶ ಸಂಘದ ಸದಸ್ಯರಿಬ್ಬರ ನಡುವೆ ಹೊಡೆದಾಟ ನಡೆದಿದೆ. ಸಂಘದ ಸದಸ್ಯರಾದ ಶ್ರೀನಿವಾಸ್ ಮತ್ತು ಪ್ರಕಾಶ್ ಎಂಬವರ  ನಡುವೆ  ಸಂಘದ ವಾರ್ಷಿಕ ಸಭೆ ನಡೆಯುವಾಗ ವೈಯಕ್ತಿಕ ವಿಚಾರಕ್ಕೆ ಸಂಬಂಧಿಸಿದಂತೆ ಬಿಗ್ ಫೈಟ್ ನಡೆದಿದೆ. ಪ್ರಕಾಶ್ ಎಂಬವರಿಗೆ ಶ್ರೀನಿವಾಸ ಮತ್ತು ಅವರ ಪುತ್ರ ಹಿಗ್ಗಾಮುಗ್ಗ  ಥಳಿಸಿದ್ದಾರೆ. ಸ್ಥಳಕ್ಕೆ ಕೆ ಆರ್ ಠಾಣೆಯ ಪೋಲಿಸರು ಭೇಟಿ ನೀಡಿದ್ದು, ವಿಚಾರಣೆ ನಡೆಸಿದ್ದಾರೆ. ಶಾಲೆಯ ಆವರಣದಲ್ಲೇ ಈ ರೀತಿ ಗಲಾಟೆ ನಡೆಸುವುದು ಎಷ್ಟು ಸೂಕ್ತ. ಆ ಶಾಲೆಯು ಖಾಸಗಿ ಆದರೂ ಸಭೆಗೆ ಅನುಮತಿ ಏಕೆ ಕೊಟ್ಟರು ಎಂಬುದೇ ನಾಗರಿಕರ ಪ್ರಶ್ನೆಯಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: