ಮನರಂಜನೆ

ಹಾವಿನ ಜೊತೆ ಸೆಲ್ಫಿ ತೆಗೆದುಕೊಂಡ ಗೋಲ್ಡನ್ ಸ್ಟಾರ್

ಶ್ರೀಲಂಕಾ,ಸೆ.25: ಗೋಲ್ಡನ್ ಸ್ಟಾರ್ ತಮ್ಮ ಕುಟುಂಬದ ಜೊತೆ ಶ್ರೀಲಂಕದ ಕೊಲಂಬೊ ಪ್ರವಾಸದಲ್ಲಿ ಬ್ಯುಸಿಯಾಗಿದ್ದಾರೆ.
ಮುಗುಳುನಗೆ ಚಿತ್ರದ ಗೆಲುವಿನ ಸಂಭ್ರಮಾಚರಣೆಯಲ್ಲಿ ಬ್ಯುಸಿಯಾಗಿದ್ದ   ಗೋಲ್ಡನ್ ಸ್ಟಾರ್ ಗಣೇಶ್  ಸದ್ಯ ಅವರು ತಮ್ಮ ಕುಟುಂಬದ ಸಮೇತ ಶ್ರೀಲಂಕಾ ಪ್ರವಾಸ ಕೈಗೊಂಡಿದ್ದಾರೆ. ಕೊಲಂಬೊದಲ್ಲಿನ ಪ್ರಾಣಿ ಸಂಗ್ರಹಾಲಯಕ್ಕೆ ಶನಿವಾರ ಭೇಟಿ ನೀಡಿದ್ದ ಗಣೇಶ್ ಹೆಬ್ಬಾವನ್ನು ಮೈಮೇಲೆ ಬಿಟ್ಟುಕೊಂಡು ಪೋಸ್ ನೀಡಿದ್ದಾರೆ. ವಿಶೇಷ ಅಂದರೆ ಗಣೇಶ್ ಜೊತೆ ಅವರ ಪುತ್ರನೂ ಇದ್ದ.  ಇಬ್ಬರು ಹೆದರದೇ ಧೈರ್ಯವಾಗಿ ಹೆಬ್ಬಾವಿನ ಜೊತೆ ಪೋಸ್ ನೀಡಿದ್ದಾರೆ.  ( ಪಿ.ಜೆ )

Leave a Reply

comments

Related Articles

error: