ದೇಶಪ್ರಮುಖ ಸುದ್ದಿ

ಅಭ್ಯರ್ಥಿಗಳ ಬಿ-ಫಾರ್ಮ್ ಗೆ ಜಯಾ ಹೆಬ್ಬೆಟ್ಟು ಸಹಿ: ಹೈಕೋರ್ಟ್ ಅಂಗಳಕ್ಕೆ ವಿವಾದ

ಚೆನ್ನೈ: ಗಂಭೀರ ಅನಾರೋಗ್ಯದ ಹಿನ್ನೆಲೆಯಲ್ಲಿ ಕಳೆದ ಒಂದು ತಿಂಗಳಿಗೂ ಹೆಚ್ಚು ಸಮಯದಿಂದ ಆಸ್ಪತ್ರೆಯಲ್ಲೆ ಚಿಕಿತ್ಸೆ ಪಡೆಯುತ್ತಿರುವ ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ, ಬಿ-ಫಾರ್ಮ್ ಗಳಿಗೆ ಹೆಬ್ಬೆಟ್ಟು ಒತ್ತುವ ಮೂಲಕ ಸಹಿ ಮಾಡಿರುವುದನ್ನು ಪ್ರಶ್ನಿಸಿ ಟ್ರಾಫಿಕ್ ರಾಮಸ್ವಾಮಿ ಅವರು ಗುರುವಾರ ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

ಮೂರು ವಿಧಾನಸಭಾ ಕ್ಷೇತ್ರಗಳಿಗೆ ನ.19ರಂದು ಉಪಚುನಾವಣೆ ನಡೆಯುತ್ತಿದ್ದು, ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿರುವ ಜೆ. ಜಯಲಲಿತಾ ಅವರ ಸಹಿಯ ಬದಲು ಹೆಬ್ಬೆಟ್ಟು ಒತ್ತಿ ಬಿ-ಫಾರ್ಮ್ ಗಳನ್ನು ವಿತರಿಸಲಾಗಿದೆ. ಅನಾರೋಗ್ಯಪೀಡಿತರಾಗಿ ಅಪೊಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಜಯಲಲಿತಾ ಅವರಿಗೆ ಕೃತಕ ಉಸಿರಾಟದ ವ್ಯವಸ್ಥೆ ಅಳವಡಿಸಿರುವುದರಿಂದ ಅವರು ಸಹಿ ಮಾಡುವ ಸ್ಥಿತಿಯಲ್ಲಿ ಇಲ್ಲ. ಹೀಗಾಗಿ ಅಭ್ಯರ್ಥಿಗಳ ಬಿ-ಫಾರ್ಮ್ಗೆ ಹೆಬ್ಬೆಟ್ಟು ಒತ್ತಿದ್ದಾರೆ. ಹೆಬ್ಬೆಟ್ಟು ಒತ್ತುವುದು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗುತ್ತದೆ. ಬಿ-ಫಾರ್ಮ್ ಗಳಿಗೆ ಹೆಬ್ಬೆಟ್ಟು ಒತ್ತುವುದು ಕಾನೂನು ಬಾಹಿರ ಮತ್ತು ಸಂವಿಧಾನಕ್ಕೆ ವಿರುದ್ಧ ಎಂದು ಘೋಷಿಸುವಂತೆ ರಾಮಸ್ವಾಮಿ ಅವರು ತಮ್ಮ ಅರ್ಜಿಯಲ್ಲಿ ಅವರು ವಾದಿಸಿದ್ದಾರೆ. ಆದರೆ ರಾಮಸ್ವಾಮಿ ಅವರ ಅರ್ಜಿಯ ವಿಚಾರಣೆಯನ್ನು ಕೋರ್ಟ್ ಇನ್ನು ಕೈಗೆತ್ತಿಕೊಂಡಿಲ್ಲ.

“ಕೃತಕ ಉಸಿರಾಟ ವ್ಯವಸ್ಥೆ ಮಾಡಿರುವುದರಿಂದ ಜಯಾ ಬಲಗೈ ಊದಿಕೊಂಡಿದ್ದು, ಸಹಿ ಮಾಡುವ ಸ್ಥಿತಿಯಲ್ಲಿಲ್ಲ. ತಮ್ಮ ಎದುರೇ ಅವರು ಹೆಬ್ಬೆಟ್ಟು ಒತ್ತಿದ್ದಾರೆ ಎಂದು ಮದ್ರಾಸ್‌ ವೈದ್ಯಕೀಯ ಕಾಲೇಜಿನ ಡಾಕ್ಟರ್ ಪಿ. ಬಾಲಾಜಿ ಅವರು ಅ. 27 ರಂದು ದೃಢೀರಿಸಿದ್ದಾರೆ. ಆದರೆ ಮಾನ್ಯತೆ ಪಡೆದ ಪಕ್ಷದ ಅಭ್ಯರ್ಥಿಗಳು ಅರ್ಜಿ ಭರ್ತಿ ಮಾಡಿ, ಪಕ್ಷದ ಮುಖ್ಯಸ್ಥರು ಸಹಿ ಮಾಡಿದ ಅರ್ಜಿಯನ್ನು ಬಿ-ಫಾರ್ಮ್ ಅನ್ನು ಸಲ್ಲಿಸಬೇಕು ಎಂದು ಆಯೋಗದ ನಿಯಮ ಹೇಳುತ್ತದೆ. ನಕಲು ಸಹಿ ಅಥವಾ ರಬ್ಬರ್‌ ಸ್ಟಾಂಪ್‌ಗೆ ಅವಕಾಶವಿಲ್ಲ. ಹೀಗಾಗಿ ಪ್ರಕರಣ ಈಗ ಹೈಕೋರ್ಟ್ ಅಂಗಳಕ್ಕೆ ಬಂದಿದೆ.

Leave a Reply

comments

Related Articles

error: